Home ಟಾಪ್ ಸುದ್ದಿಗಳು ಮಮತಾ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಂಧಿತ ಯೂಟ್ಯೂಬರ್ ನನ್ನು ಕೋಲ್ಕತಾಗೆ ಕರೆತಂದ ಪೊಲೀಸರು

ಮಮತಾ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಂಧಿತ ಯೂಟ್ಯೂಬರ್ ನನ್ನು ಕೋಲ್ಕತಾಗೆ ಕರೆತಂದ ಪೊಲೀಸರು

ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ನಿಂದಿಸಿದ ಆರೋಪದ ಮೇಲೆ ಗೋವಾದಲ್ಲಿ ಕೋಲ್ಕತಾ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಯೂಟ್ಯೂಬರ್ ಮತ್ತು ವ್ಲಾಗರ್ ರೊದ್ದೂರ್ ರಾಯ್ ಅವರನ್ನು ಬುಧವಾರ ಸಂಜೆ ಟ್ರಾನ್ಸಿಟ್ ರಿಮಾಂಡ್ ಮೇಲೆ ಕೋಲ್ಕತಾಗೆ ಕರೆತರಲಾಯಿತು.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರನ್ನು ನಿಂದಿಸಿದ ಆರೋಪದ ಮೇಲೆ ರಾಯ್ ಅವರನ್ನು ಜೂನ್ 7 ರಂದು ಗೋವಾದಿಂದ ಬಂಧಿಸಲಾಗಿತ್ತು.

ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version