Home ಕರಾವಳಿ ಸುಳ್ಯ: ಶಾಲೆಯ ಅಕ್ಕಿ ಪಡಿತರ ಅಂಗಡಿಯಲ್ಲಿ ಬದಲಾವಣೆ ವಿಚಾರ: ಶಾಲಾ ಮುಖ್ಯೋಪಾಧ್ಯಾಯರಿಂದ ಸ್ಪಷ್ಟನೆ

ಸುಳ್ಯ: ಶಾಲೆಯ ಅಕ್ಕಿ ಪಡಿತರ ಅಂಗಡಿಯಲ್ಲಿ ಬದಲಾವಣೆ ವಿಚಾರ: ಶಾಲಾ ಮುಖ್ಯೋಪಾಧ್ಯಾಯರಿಂದ ಸ್ಪಷ್ಟನೆ

ಸುಳ್ಯ: ಇಲ್ಲಿನ ವಿವೇಕಾನಂದ ಶಾಲೆಯ ಅಕ್ಷರ ದಾಸೋಹದ ಅಕ್ಕಿಯನ್ನು ಪಡಿತರ ಅಂಗಡಿಗೆ ಸಾಗಿಸಿ, ಬದಲಿ ಅಕ್ಕಿ ತರಿಸಿಕೊಳ್ಳುತ್ತಿದ್ದಾಗ ಊರವರೇ ತಡೆದು ನಿಲ್ಲಿಸಿ ಅಕ್ಕಿಯನ್ನು ಮರಳಿ ಶಾಲೆಗೆ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜೂ. 8 ರಂದು ಬಿ.ಇ.ಒ. ಎಸ್.ಪಿ.ಮಹಾದೇವ್ ಅವರು ಶಾಲೆಗೆ  ಭೇಟಿ ನೀಡಿ ಅಕ್ಕಿ ದಾಸ್ತಾನು ಪರಿಶೀಲಿಸಿ ಎಲ್ಲವೂ ಸರಿಯಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಶಾಲಾ ಮುಖ್ಯೋಪಾಧ್ಯಾಯರು ಬೆಳ್ತಿಗೆ ಅಕ್ಕಿಯ ಅನ್ನ ಶಾಲಾ ಮಕ್ಕಳು ಊಟ ಮಾಡಲು ಕಷ್ಟವಾಗುವ ಕಾರಣ ಅದನ್ನು ಕುಚ್ಲಕ್ಕಿಯೊಂದಿಗೆ ವಿನಿಮಯ ಮಾಡಿಕೊಂಡಿದ್ದೇವೆ. ಸರ್ಕಾರದಿಂದ ಅಕ್ಷರದಾಸೋಹಕ್ಕೆ ಉತ್ತಮ ದರ್ಜೆಯ ಬೆಳ್ತಿಗೆ ಅಕ್ಕಿ ನಮ್ಮ ಶಾಲೆಗೆ ಪೂರೈಕೆಯಾಗುತ್ತಿದೆ. ಆದರೆ ಕರಾವಳಿ ಜಿಲ್ಲೆಯ ಜನರಿಗೆ ಪ್ರತಿನಿತ್ಯ ಬೆಳ್ತಿಗೆ ಅಕ್ಕಿಯ ಊಟ ಇಲ್ಲಿ ಆರೋಗ್ಯಕ್ಕೆ ಸ್ವಲ್ಪ ಕಷ್ಟ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.ನಮ್ಮ ಶಾಲೆಯ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸ್ಥಳೀಯ ಸಂಸ್ಥೆಯಲ್ಲಿ ಇರುವ ಕುಚ್ಲಕ್ಕಿಯೊಂದಿಗೆ ಬದಲಾವಣೆ ಮಾಡಿಕೊಳ್ಳುವ ಪ್ರಯತ್ನ ಮಾಡಿರುವುದು ಸತ್ಯ. ನಮ್ಮೊಳಗಿನ ಭಿನ್ನಾಭಿಪ್ರಾಯಗಳು ಏನಿದ್ದರೂ ಮಕ್ಕಳ ಆರೋಗ್ಯ, ವಿದ್ಯಾಭ್ಯಾಸ, ಸಂಸ್ಥೆಯ ಹಿತಕ್ಕೆ ಧಕ್ಕೆಯಾಗದಂತೆ ಎಲ್ಲರೂ ಸಹಕರಿಸಬೇಕಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Join Whatsapp
Exit mobile version