Home ಟಾಪ್ ಸುದ್ದಿಗಳು ನಮಾಜ್ ಗಾಗಿ ಮಸೀದಿಗೆ ತೆರಳುತ್ತಿದ್ದ ಯುವಕನನ್ನು ಹಾಡಹಗಲೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ನಮಾಜ್ ಗಾಗಿ ಮಸೀದಿಗೆ ತೆರಳುತ್ತಿದ್ದ ಯುವಕನನ್ನು ಹಾಡಹಗಲೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಪಾಟ್ನಾ: ನಮಾಜ್ ಮಾಡಲು ಮಸೀದಿಗೆ ತೆರಳುತ್ತಿದ್ದ ಯುವಕನನ್ನು ಹಾಡಹಗಲೇ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

ಸಮಸ್ತಿಪುರ ಜಿಲ್ಲೆಯ ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯ ರತ್ವಾರಾದಲ್ಲಿ ಈ ಘಟನೆ ನಡೆದಿದ್ದು, ರತ್ವಾರ ನಿವಾಸಿಯಾದ ದುಲಾರೆ ಹತ್ಯೆಗೀಡಾಗಿರುವವರು. ಗುಂಡಿನ ದಾಳಿಯಲ್ಲಿ ಒಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಹತ್ತಿರದ ಆಸ್ಪತ್ರಗೆ ದಾಖಲಿಸಲಾಗಿದೆ.

ತೆಲಂಗಾಣದ ಹೈದರಾಬಾದ್ ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ದುಲಾರೆ ರತ್ವಾರಕ್ಕೆ ರಜೆಯ ಮೇಲೆ ಬಂದಿದ್ದರು. ನಮಾಜ್ ಮಾಡಲು ಮನೆಯಿಂದ ಹೊರಟಿದ್ದ ಸಮಯದಲ್ಲಿ ಹೊಂಚು ಹಾಕಿದ್ದ ದುಷ್ಕರ್ಮಿಗಳು ದುಲಾರೆ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

https://twitter.com/AhmedKhabeer_/status/1585480215442370560?s=20&t=FhlqGpCe7KSISq4jPQ_SCw

ಈ ಘಟನೆಯಿಂದ ಕೋಪಗೊಂಡ ಜನರು ರಸ್ತೆ ತಡೆ ನಡೆಸಿ ಘೋಷಣೆಗಳನ್ನು ಕೂಗಿದರು. ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನಿಸಿದರು ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Join Whatsapp
Exit mobile version