Home ಟಾಪ್ ಸುದ್ದಿಗಳು ಮನೆ ಮೇಲೆ ಹಸಿರು ಧ್ವಜ ಹಾರಾಡಿಸಿದ ಆರೋಪದಲ್ಲಿ  ವ್ಯಕ್ತಿಯ ಬಂಧನ

ಮನೆ ಮೇಲೆ ಹಸಿರು ಧ್ವಜ ಹಾರಾಡಿಸಿದ ಆರೋಪದಲ್ಲಿ  ವ್ಯಕ್ತಿಯ ಬಂಧನ

ರಾಯ್ಪುರ: ತನ್ನ ಮನೆ ಮೇಲೆ ಹಸಿರು ಧ್ವಜ ಹಾರಿಸಿದ್ದಾರೆ ಎಂದು  52 ವರ್ಷದ ವ್ಯಕ್ತಿಯನ್ನು ಬಂಧಿಸಿದ  ಘಟನೆ ಸಾರಂಗಢ-ಭಿಲೈಗಢ ಜಿಲ್ಲೆಯಲ್ಲಿ ನಡೆದಿದೆ.

ಸರಿಯಾ ಪಟ್ಟಣದ ಅಟಲ್ ಚೌಕ್ ಪ್ರದೇಶದಲ್ಲಿನ ಮನೆ ಮೇಲೆ ಹಸಿರು ಧ್ವಜವನ್ನು ಹಾರಿಸಲಾಗಿದೆ ಎಂದು ಪೊಲೀಸರು ದೂರು ಸ್ವೀಕರಿಸಿದ ನಂತರ ಹಣ್ಣಿನ ಮಾರಾಟಗಾರ ಮುಸ್ತಾಕ್ ಖಾನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಧ್ವಜವನ್ನು ವಶಪಡಿಸಿಕೊಂಡಿದ್ದು, ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ಧರ್ಮ, ಜನಾಂಗ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಬಗ್ಗೆ ಕೆಲವು ಸ್ಥಳೀಯ ಬಿಜೆಪಿ ಮುಖಂಡರು ಧ್ವಜ ಹಾರಾಟ ನಡೆಸಿದ ವ್ಯಕ್ತಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ರಿಯಾ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

Join Whatsapp
Exit mobile version