ಬಂಟ್ವಾಳ: ಪೆಟ್ರೋಲ್ ಸುರಿದು ಯುವಕನೋರ್ವನನ್ನು ಕೊಲೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬೋಳಂತೂರು ನಿವಾಸಿ, ಆಟೋ ರಿಕ್ಷಾ ಚಾಲಕ ಅಬ್ದುಲ್ ರಹಿಮಾನ್ ಬಂಧಿತ ವ್ಯಕ್ತಿ.
ಘಟನೆ ರವಿವಾರ ನಡೆದಿದ್ದು, ಇಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುರಿಬೈಲ್ ನಿವಾಸಿ ಸಮದ್ (19) ಎಂಬ ಯುವಕನನ್ನು ಇರಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮದ್ ಹಾಗೂ ಅಬ್ದುಲ್ ರಹಿಮಾನ್ ಜೊತೆಯಲ್ಲೇ ಇರುತ್ತಿದ್ದರು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.