ಬೆಂಗಳೂರು: ಕೋರಮಂಗಲದಲ್ಲಿ ಜಾಲಿ ರೈಡ್ ಮಾಡುತ್ತಿದ್ದ ಆಡಿ ಕಾರು ಅಪಘಾತಗೊಂಡು 7 ಮಂದಿ ಸಾವನ್ನಪ್ಪಿದ ದುರ್ಘಟನೆ ಮಾಸುವ ಮುನ್ನವೇ ನಿನ್ನೆ ರಾತ್ರಿ ಸದಾಶಿವನಗರದಲ್ಲಿ ಯುವಕ, ಯುವತಿಯರು ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಭರ್ಜರಿ ಮ್ಯೂಸಿಕ್ ಹಾಕಿಕೊಂಡು ಜಾಲಿ ರೈಡ್ ಮಾಡಿದ್ದಾರೆ.
ಕಾರಿನ ಮೇಲ್ಛಾವಣಿಯನ್ನು ತೆರೆದುಕೊಂಡು ಚಲಿಸುವ ಕಾರಿನಲ್ಲಿ ಡ್ಯಾನ್ಸ್ ಮಾಡುತ್ತಾ, ಜೋರಾಗಿ ಕೂಗಾಡುತ್ತಾ ಪೊಲೀಸರ ಮುಂದೆಯೇ ಜಾಲಿ ರೈಡ್ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಕಾರಿನಲ್ಲಿ ಯುವಕ, ಯುವತಿಯರು ನೃತ್ಯ ಮಾಡುತ್ತಾ ಕೂಗೂತ್ತಾ ಅಪಾಯಕಾರಿಯಾಗಿ ಜಾಲಿ ರೈಡ್ ಮಾಡುತ್ತಾ ಪುಂಡಾಟ ವಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಎ-04 ಎಂವೈ-0450 ನಂಬರ್ನ ಮರ್ಸಿಡಿಸ್ ಬೆಂಜ್ ಕಾರು ಇದಾಗಿದೆ. ಕಾರಿನ ಎರಡು ಕಡೆ ಬಾಗಿಲು ಹಾಗೂ ಮೇಲ್ಛಾವಣಿಯನ್ನು ತರೆದುಕೊಂಡು ಯುವಕ-ಯುವತಿಯರು ಸುತ್ತಾಡಿದ್ದಾರೆ. ಎಚ್ಚೆತ್ತುಕೊಂಡ ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದಾರೆ. ಕಾರಿನ ಮಾಲೀಕನನ್ನು ಸಂಜಿತ್ ಶೆಟ್ಟಿ ಎಂದು ಗುರುತಿಸಲಾಗಿದೆ.