ಚಿಕ್ಕಬಳ್ಳಾಪುರ: ಸೆಲ್ಫಿ ತೆಗೆಯಲು ಅಣೆಕಟ್ಟು ಮೇಲೆ ಏರಿದ ಯುವಕನೋರ್ವ ಜಾರಿ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಚಿಕ್ಕಬಳ್ಳಾಪುರ ಶ್ರೀನಿವಾಸ ಸಾಗರ್ ಡ್ಯಾಮ್ ನಲ್ಲಿ ನಿನ್ನೆ ನಡೆದಿದೆ.
ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ್ ಡ್ಯಾಮ್ ನಲ್ಲಿ ನೀರು ಜಲಪಾತದಂತೆ ಹರಿಯುತ್ತಿದ್ದು, ನಿನ್ನೆ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಈ ವೇಳೆ ಯುವಕನೋರ್ವ ಅಣೆಕಟ್ಟಿನ ಗೋಡೆಯ ಮೇಲೆ ಏರಿದ್ದಾನೆ. ಅರ್ಧ ಹತ್ತಿದಾಗ ಆಯ ತಪ್ಪಿ, ದರ ದರನೆ ಕೆಳಗೆ ಬಿದ್ದಿದ್ದಾನೆ. ಇದರ ವೀಡಿಯೋ ವೈರಲ್ ಆಗಿದೆ.
ಗಾಯಗೊಂಡ ಯುವಕನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ವಿರುದ್ಧ ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.