Home ಕರಾವಳಿ ಉಪ್ಪಿನಂಗಡಿ | ಹೊಂಡದಲ್ಲಿ ಸಿಲುಕಿದ ಕಂಟೈನರ್: ರಾಷ್ಟ್ರೀಯ ಹೆದ್ದಾರಿ ಜಾಮ್

ಉಪ್ಪಿನಂಗಡಿ | ಹೊಂಡದಲ್ಲಿ ಸಿಲುಕಿದ ಕಂಟೈನರ್: ರಾಷ್ಟ್ರೀಯ ಹೆದ್ದಾರಿ ಜಾಮ್

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭಾರಿ ಗಾತ್ರದ ಎರಡು ಸರಕು ಸಾಗಣೆ ವಾಹನಗಳು ಹೊಂಡದಲ್ಲಿ ಸಿಲುಕಿದ ಪರಿಣಾಮ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾದ ಘಟನೆ ಮಂಗಳೂರು-ಬೆಂಗಳೂರು ರಸ್ತೆಯ ಉಪ್ಪಿನಂಗಡಿ ಬಳಿಯ ಕರ್ವೆಲ್ ಎಂಬಲ್ಲಿ ನಡೆದಿದೆ.


ಸೋಮವಾರ ಬೆಳಗ್ಗೆ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಭಾರಿ ಗಾತ್ರದ ಕಂಟೈನರ್ ರಸ್ತೆಯ ಬದಿಯ ಹೊಂಡದಲ್ಲಿ ಸಿಲುಕಿತ್ತು. ಬೆನ್ನಲ್ಲೇ ಅದೇ ಮಾರ್ಗದಲ್ಲಿ ಬಂದ ಮತ್ತೊಂದು ಕಂಟೈನರ್ ಇನ್ನೊಂದು ಬದಿಯಲ್ಲಿ ಸಿಲುಕಿತು. ಪರಿಣಾಮ ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.
ಹೆದ್ದಾರಿ ಬದಿಯ ಹೊಂಡ ತುಂಬಾ ದಿನಗಳಿಂದ ಅಪಾಯವನ್ನು ಆಹ್ವಾನಿಸುತ್ತಿತ್ತು. ಈ ಸಂಬಂಧ ಸ್ಥಳೀಯರು ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇವತ್ತು ಅವಘಡ ಸಂಭವಿಸಿದ್ದರಿಂದ ಸ್ಥಳೀಯ ಜನರು ಹಾಗೂ ವಾಹನ ಸವಾರರು ಆಕ್ರೋಶ ವ್ಯಕ್ತಪಡಿದ್ದಾರೆ.
ಸ್ಥಳೀಯ ಯುವಕರು ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಿ ಮಣ್ಣು ತಂದು ಹೊಂಡ ಮುಚ್ಚಿದ್ದಾರೆ.

Join Whatsapp
Exit mobile version