Home ಟಾಪ್ ಸುದ್ದಿಗಳು ಶಾಂತಿ ಕಾಪಾಡಲು ನೀವೇನು ಪುಕ್ಕಟೆ ಸಲಹೆ ಕೊಡಬೇಕಾಗಿಲ್ಲ; ನಾವು ಯಾವತ್ತೂ ಇಲ್ಲಿ ಅರಾಜಕತೆ, ಅಶಾಂತಿ ಮಾಡಿಲ್ಲ:...

ಶಾಂತಿ ಕಾಪಾಡಲು ನೀವೇನು ಪುಕ್ಕಟೆ ಸಲಹೆ ಕೊಡಬೇಕಾಗಿಲ್ಲ; ನಾವು ಯಾವತ್ತೂ ಇಲ್ಲಿ ಅರಾಜಕತೆ, ಅಶಾಂತಿ ಮಾಡಿಲ್ಲ: ಅನೀಸ್ ಕೌಸರಿ

ಬೆಂಗಳೂರು: ಹಿಜಾಬ್ ಕುರಿತ ತೀರ್ಪು ಬಂದಿದೆ. ತೀರ್ಪಿನಲ್ಲಿ ನಿರಾಶೆ ಇದೆ. ಆದರೂ ನ್ಯಾಯಾಲಯವನ್ನು ಗೌರವಿಸುತ್ತೇವೆ. ಮೇಲ್ಮನವಿಗೆ ಅವಕಾಶವಿದೆ. ಖಂಡಿತವಾಗಿಯೂ ಸಮುದಾಯ ನಾಯತಕತ್ವ ಚಿಂತಿಸಿ ಮುಂದಿನ ಹೆಜ್ಜೆ ಇರಿಸಲಿದೆ ಎಂದು ಎಸ್ ಕೆಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಪ್ರತಿಕ್ರಿಯಿಸಿದ್ದಾರೆ.

ಶಾಂತಿ ಕಾಪಾಡಲು ನೀವೇನು ಪುಕ್ಕಟೆ ಸಲಹೆ ಕೊಡಬೇಕಾಗಿಲ್ಲ. ಮುಸ್ಲಿಮ್ ಸಮುದಾಯ ಯಾವತ್ತೂ ಇಲ್ಲಿ ಅರಾಜಕತೆ, ಅಶಾಂತಿ ಮಾಡಿಲ್ಲ. ಇಂದೂ, ಇನ್ನೆಂದೂ ಮಾಡುವುದಿಲ್ಲ. ಸಹನೆ ನಮ್ಮ ಈಮಾನಿನ ಅಂಶವಾಗಿದೆ. ಈ ನೋವು ಕೊಡುವುದರೆಡೆಯಲ್ಲೂ ಮುಸ್ಲಿಂ ಸಮುದಾಯವನ್ನು ಭೀಕರ ಜೀವಿಗಳಾಗಿ ಚಿತ್ರೀಕರಿಸಲು ತುಕಡಿ, ಸೆಕ್ಷನ್ ಹೀಗೆ ಏನೇನೋ ಮಾತಿನಲ್ಲಿ ಮಾಧ್ಯಮಗಳು ಜೋತು ಬಿದ್ದಿದೆ. ಕೂಲಿಯಾಳು ಮಾಧ್ಯಮಗಳು ಕೂಲಿ ಕೆಲಸ ಮುಂದುವರಿಸುತ್ತಿದೆ. ಹಿಜಾಬಿಗಾಗಿ ಬೋನಸ್ ಸಿಕ್ಕಿರಬಹುದು. ಮಾಡಲಿ, ಆಲ್ ರೈಟ್ ನಾವು ಮುಂದಕ್ಕೋಗೋನ…ಎಂದು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.

ಪರಿಣಾಮ ಏನಾಗಲಿದೆ? ಈ ಪ್ರಕರಣದ ಮೂಲಕ ಕೋಮುವಾದಿಗಳ ಉದ್ದೇಶ ಈಡೇರಲಿದೆ. ಕ್ಯಾಂಪಸ್ ಗಳು ಹಿಂದೂ ಮುಸ್ಲಿಂ ಆಗಿ ವಿಂಗಡನೆವಾಗಲಿದೆ. ಮುಸ್ಲಿಮರ ಶಾಲೆ, ಹಿಂದೂಗಳ ಶಾಲೆ ಹೀಗೆ…. ಭವಿಷ್ಯದ ನವ ಮತದಾರರು ಕೋಮುವಾದಿ ರಾಜಕೀಯಕ್ಕೆ ಸುಲಭವಾಗಿ ಲಭ್ಯವಾಗಲಿದೆ. ಮುಸ್ಲಿಮರನ್ನು ಮುಖ್ಯವಾಹಿನಿಯಿಂದ ಬೇರ್ಪಡಿಸುವ ಸಂಘಪರಿವಾರ ಅಜೆಂಡಾಗೆ ರಹದಾರಿ ಸಿಕ್ಕಿದೆ. ಬೆಳೆಯದ ಮೆದುಲಿಗೆ ಕೋಮು ಅಮಲು ಸುಲಭವಾಗಿ ರೀಚಾಯಿತು. ಸಮಾನತೆಯ ಹೆಸರಿನಲ್ಲಿ ಅಸಮಾನತೆಯ, ಕೋಮು ವೈಷಮ್ಯದ ಆಳವಾದ ಕಂದಕವೊಂದನ್ನು ತೋಡಲಾಯಿತು! ಬಿದ್ದು ನರಳಾಡಬೇಕಾದ ನಾಳೆಗಳು ನಮ್ಮದು ಮತ್ತು ಮಕ್ಕಳದ್ದು!! ಸೂತ್ರದಾರರ ಮಕ್ಕಳು ದೂರದ ಯೂರೋಪಿನಲ್ಲಿ ಆರಾಮವಾಗಿದ್ದಾರೆ! ಎಂದು ಅವರು ಫೇಸ್ ಬುಕ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version