Home ಟಾಪ್ ಸುದ್ದಿಗಳು ಹಿಜಾಬ್ ನಿಷೇಧ ಪ್ರಶ್ನಿಸಿ ಮೇಲ್ಮನವಿ: ಸುಪ್ರೀಂಕೋರ್ಟ್ ನಲ್ಲೂ ವಾದಮಂಡಿಸಲಿರುವ ದೇವದತ್ ಕಾಮತ್

ಹಿಜಾಬ್ ನಿಷೇಧ ಪ್ರಶ್ನಿಸಿ ಮೇಲ್ಮನವಿ: ಸುಪ್ರೀಂಕೋರ್ಟ್ ನಲ್ಲೂ ವಾದಮಂಡಿಸಲಿರುವ ದೇವದತ್ ಕಾಮತ್

ಬೆಂಗಳೂರು: ಹಿಜಾಬ್ ಧಾರಣೆ ಇಸ್ಲಾಂನ ಕಡ್ಡಾಯ ಭಾಗವಲ್ಲ, ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಬಾರದು, ಸರ್ಕಾರದ ಸಮವಸ್ತ್ರ ಆದೇಶ ಪಾಲನೆ ಕಡ್ಡಾಯವಾಗಬೇಕು ಎಂದು ಕರ್ನಾಟಕ ಹೈಕೋರ್ಟ್ ನ ತೀರ್ಪು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಗೆ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ಈ ವಿಚಾರವಾಗಿ ಹಿರಿಯ ನ್ಯಾಯವಾದಿ ದೇವದತ್ ಕಾಮತ್ ಮತ್ತು ನಿಝಾಮ್ ಪಾಷಾ, ನಿಶಾಂತ್ ಪಾಟೀಲ್, ಜಾವೇದ್ ರಹ್ಮಾನ್ ವಾದ ಮಂಡಿಸಲಿದ್ದಾರೆ ಎಂದು ಅಸೋಷಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್(ಎಪಿಸಿಆರ್) ನ ರಾಜ್ಯ ಕಾರ್ಯದರ್ಶಿ, ನ್ಯಾಯವಾದಿ ನಿಯಾಝ್ ತಿಳಿಸಿದ್ದಾರೆ.

Join Whatsapp
Exit mobile version