Home ಟಾಪ್ ಸುದ್ದಿಗಳು ಶ್ರೀರಾಮ ವಿಮಾನ ನಿಲ್ದಾಣಕ್ಕೆ 101ಕೋಟಿ : ಕಾಗದ ರಹಿತ ಬಜೆಟ್ ಮಂಡಿಸಿದ ಯೋಗಿ ಸರಕಾರ

ಶ್ರೀರಾಮ ವಿಮಾನ ನಿಲ್ದಾಣಕ್ಕೆ 101ಕೋಟಿ : ಕಾಗದ ರಹಿತ ಬಜೆಟ್ ಮಂಡಿಸಿದ ಯೋಗಿ ಸರಕಾರ

ಉತ್ತರ ಪ್ರದೇಶ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲು ಕೇವಲ ಒಂದು ವರ್ಷ ಬಾಕಿ ಇರುವಾಗ, ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಸರಕಾರ ಬಜೆಟ್ ಮಂಡಿಸಿದೆ.  ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಅವರು ಬಜೆಟ್ ಮಂಡಿಸಿದರು. ಕುತೂಹಲಕಾರಿ ಸಂಗತಿಯೆಂದರೆ, ದಾಖಲೆಯ ಭೌತಿಕ ಪ್ರತಿಗಳನ್ನು ಕೋರಿ ಪ್ರತಿಪಕ್ಷಗಳ ಪ್ರತಿಭಟನೆಯ ಮಧ್ಯೆ ಯೋಗಿ ಆದಿತ್ಯನಾಥ್ ಸರ್ಕಾರ ರಾಜ್ಯ ವಿಧಾನಸಭೆಯಲ್ಲಿ ಕಾಗದರಹಿತ ಬಜೆಟ್ ಮಂಡಿಸಿದೆ.

ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ವಿಮಾನ ನಿಲ್ದಾಣಕ್ಕೆ ಖನ್ನಾ 101 ಕೋಟಿ ರೂ.ಗಳ ಬಜೆಟ್ ನಿಬಂಧನೆಯನ್ನು ಮಂಡಿಸಿದ್ದಾರೆ.  ಈ ವಿಮಾನ ನಿಲ್ದಾಣಕ್ಕೆ ಮರ್ಯಾದಾ ಪುರುಷೋತ್ತಂ ಶ್ರೀರಾಮ್ ವಿಮಾನ ನಿಲ್ದಾಣ ಎಂದು ಹೆಸರಿಸಲಾಗಿದೆ.

ಅಧಿಕೃತ ಮೂಲಗಳ ಮಾಹಿತಿ ಪ್ರಕಾರ ಯೋಗಿ ಆದಿತ್ಯನಾಥ್ ಸರ್ಕಾರವು ವಿಮಾನ ನಿಲ್ದಾಣವನ್ನು ಪೂರ್ಣಗೊಳಿಸಲು ಡಿಸೆಂಬರ್ 2021 ರ ಗಡುವನ್ನು ನಿಗದಿಪಡಿಸಿದೆ.

Join Whatsapp
Exit mobile version