Home ಟಾಪ್ ಸುದ್ದಿಗಳು ‘ನಾನೂ ಮನುಷ್ಯನೇ, ದೇವರಲ್ಲ, ನನ್ನಿಂದಲೂ ತಪ್ಪುಗಳು ಸಂಭವಿಸಿವೆ’: ಪ್ರಧಾನಿ ಮೋದಿ

‘ನಾನೂ ಮನುಷ್ಯನೇ, ದೇವರಲ್ಲ, ನನ್ನಿಂದಲೂ ತಪ್ಪುಗಳು ಸಂಭವಿಸಿವೆ’: ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪಾಡ್‌ ಕಾಸ್ಟ್‌ ಗೆ ಪದಾರ್ಪಣೆ ಮಾಡಿದ್ದಾರೆ. ‘ಝೆರೋದಾ’ ಸಹ ಸಂಸ್ಥಾಪಕ ನಿಖಿಲ್ ಕಾಮತ್‌ ನಡೆಸಿಕೊಟ್ಟಿರುವ ಪಾಡ್‌ ಕಾಸ್ಟ್‌ ನಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.

‘ನಾನೂ ಮನುಷ್ಯನೇ, ದೇವರಲ್ಲ. ತಪ್ಪುಗಳು ಸಂಭವಿಸುವುದು ಸಹಜ. ನನ್ನಿಂದಲೂ ತಪ್ಪುಗಳು ಸಂಭವಿಸಿವೆ’ ಎಂದು ಹೇಳಿದ್ದಾರೆ.

ಈ ವೇಳೆ ಒಳ್ಳೆಯ ವ್ಯಕ್ತಿಗಳು ರಾಜಕೀಯಕ್ಕೆ ಧುಮುಕಬೇಕು ಎಂದು ಪ್ರಧಾನಿ ಮೋದಿ ಆಗ್ರಹಿಸಿದ್ದಾರೆ. ಅವರು ಮಹತ್ವಾಕಾಂಕ್ಷೆಯ ಬದಲು ಸ್ಪಷ್ಟವಾದ ಗುರಿ ಹೊಂದಿರಬೇಕು ಎಂದು ಸಲಹೆ ನೀಡಿದ್ದಾರೆ.

ಚೊಚ್ಚಲ ಪಾಡ್‌ಕಾಸ್ಟ್ ಅನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಹಂಚಿರುವ ಪ್ರಧಾನಿ ಮೋದಿ, ನಿಖಿಲ್ ಕಾಮತ್ ಅವರೊಂದಿಗಿನ ಸಂಭಾಷಣೆಯನ್ನು ಆನಂದಿಸಿರುವುದಾಗಿ ತಿಳಿಸಿದ್ದಾರೆ.

Join Whatsapp
Exit mobile version