Home ಟಾಪ್ ಸುದ್ದಿಗಳು ಸರ್ಕಾರಿ ಉದ್ಯೋದಲ್ಲಿರುವವರಿಗೆ 1 ರುಪಾಯಿಗೆ ಮನೆ ‘ಭಾಗ್ಯ’ !

ಸರ್ಕಾರಿ ಉದ್ಯೋದಲ್ಲಿರುವವರಿಗೆ 1 ರುಪಾಯಿಗೆ ಮನೆ ‘ಭಾಗ್ಯ’ !

ಲಕ್ನೋ: ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಜನಪ್ರಿಯ ಯೋಜನೆಗಳ ಮೂಲಕ ಮತದಾರರನ್ನು ಸೆಳೆಯಲು ಯೋಗಿ ಅದಿತ್ಯನಾಥ್ ಸರ್ಕಾರ ಮುಂದಾಗಿದೆ.

ಸರ್ಕಾರಿ ನೌಕರರು ಹಾಗೂ ವಕೀಲರಿಗೆ ಒಂದು ರುಪಯಿಗೆ ಮನೆ ನೀಡುವ ಯೋಜನೆಯ ಕರಡನ್ನು ಸಿದ್ಧಪಡಿಸಲಾಗಿದ್ದು, ಈ ಮನೆಗಳ ಹಂಚಿಕೆಗೆ ಅರ್ಹತೆಯ ಮಾನದಂಡಗಳನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ತಿಳಿದುಬಂದಿದೆ

ಮುಂದಿನ 10 ವರ್ಷಗಳವರೆಗೆ ಮನೆಗಳನ್ನು ಮಾರಾಟ ಮಾಡುವುದಿಲ್ಲ ಎಂಬ ಷರತ್ತಿಗೆ ಒಳಪಡುವವರು ಮಾತ್ರ  ಈ ಮನೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಹೊಸ ಯೋಜನೆಯಡಿ, ಯೋಗಿ ಆದಿತ್ಯನಾಥ್ ಸರ್ಕಾರವು, ಸರ್ಕಾರಿ ನೌಕರರು ಮತ್ತು ವಕೀಲರಿಗೆ ಸಹಾಯಧನದ ಸಬ್ಸಿಡಿಯಲ್ಲಿ ಮನೆಗಳನ್ನು ನೀಡಲು ಮುಂದಾಗಿದೆ. ಗ್ರೂಪ್ ಸಿ ಮತ್ತು ಡಿ ಯ ವಕೀಲರಿಗೆ ಈ ಮನೆಗಳ ಖರೀದಿಗೆ ಕೇವಲ 1 ರೂಪಾಯಿ ದರವನ್ನು ವಿಧಿಸಲಾಗುತ್ತದೆ ಎಂದು ಪ್ರಮುಖ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಯೋಜನೆಗಳ ಕರಡನ್ನು ಸಿದ್ಧಪಡಿಸಲಾಗಿದೆ. ಉನ್ನತ ಮಟ್ಟದ ಅನುಮೋದನೆಯ ನಂತರ, ಈ ಪ್ರಸ್ತಾವನೆಯನ್ನು ಸಂಪುಟವು ಅಂಗೀಕರಿಸುತ್ತದೆ. ಅದರ ನಂತರವೇ ಸಾವಿರಾರು ನೌಕರರು ಈ ಯೋಜನೆಯ ಲಾಭ ಪಡೆಯುವ ಸಾಧ್ಯತೆಯಿದೆ.

ಈ ಯೋಜನೆಯ ಕರಡು ಸಿದ್ಧಪಡಿಸುವಾಗ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರು ಮತ್ತು ಹೆಚ್ಚಿನ ಆದಾಯವಿಲ್ಲದ ಅಂತಹ ವಕೀಲರು ಹೊಸ ಮನೆ ಖರೀದಿಗೆ ಅವಕಾಶ ಒದಗಿಸಲಾಗಿದೆ. ಈ ಒಂದು ರೂಪಾಯಿಯ ಮನೆಗಳನ್ನು ನೀಡುವ ಪ್ರಕ್ರಿಯೆಯ ಬಗ್ಗೆ ಆರಂಭಿಕ ಸುತ್ತಿನ ಮಾತುಕತೆಯಲ್ಲಿ ಹೆಚ್ಚಿನ ಸಹಮತ ವ್ಯಕ್ತವಾಗಿದೆ.

ಮುಂದಿನ ವರ್ಷದ ಆರಂಭದಲ್ಲೇ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ತಮ್ಮದೇ ಆದ ಕಾರ್ಯತಂತ್ರವನ್ನು ರೂಪಿಸಿದೆ. ಪ್ರಚಾರ ಕಾರ್ಯವನ್ನು ಮಾಡುತ್ತಿದೆ. ಈ ಐದು ರಾಜ್ಯಗಳ ಪೈಕಿ ಉತ್ತರ ಪ್ರದೇಶವು ರಾಜಕೀಯವಾಗಿ ಹೆಚ್ಚು ಪ್ರಮುಖವಾಗಿದೆ.

.

ದೇಶದಲ್ಲಿ ಅತೀ ಹೆಚ್ಚು ವಿಧಾನ ಸಭೆ ಕ್ಷೇತ್ರವನ್ನು ಉತ್ತರ ಪ್ರದೇಶ ಹೊಂದಿದ್ದು, ಉತ್ತರ ಪ್ರದೇಶವು ಒಟ್ಟು 403 ಸದಸ್ಯರನ್ನು ಹೊಂದಿದೆ. ಕಳೆದ ಬಾರಿ ಬಿಜೆಪಿಯು ಭರ್ಜರಿ ಬಹುಮತದಿಂದ ಜಯ ಸಾಧಿಸಿದೆ. ಈ ಬಾರಿ ಮತ್ತೆ ಅಧಿಕಾರವನ್ನು ಏರುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದಾರೆ.

Join Whatsapp
Exit mobile version