ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬುಧವಾರ ಅಂಕಿತ ಹಾಕಿದ್ದಾರೆ. ಸೋಮವಾರ ಸಂಸತ್ತು ಉಭಯ ಸದನಗಳಲ್ಲಿ ಧ್ವನಿ ಮತಗಳಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಕ್ಕೆ ಅನುಮೋದನೆ ನೀಡಿತು.
ಪ್ರಧಾನಿ ನರೇಂದ್ರ ಮೋದಿ, ಗುರುನಾನಕ್ ಜಯಂತಿಯಂದು ಮೂರು ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯುತ್ತಿರುವುದಾಗಿ ಘೋಷಿಸಿದ್ದರು. ಈ ಬಳಿಕ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮೂರು ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯುವ ಮಸೂದೆಗೆ ಒಪ್ಪಿಗೆ ಸೂಚಿಸಲಾಗಿತ್ತು.
ಸೋಮವಾರದ ವಿದ್ಯಮಾನದ ಬಳಿಕ ಲೋಕಸಭೆಯಲ್ಲಿ ಕೃಷಿ ಸಚಿವರು ವಿವಾದಿತ ಮೂರು ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯೋದಕ್ಕೆ ಮಸೂದೆಯನ್ನು ಮಂಡಿಸಿದ್ದರು. ಯಾವುದೇ ಚರ್ಚೆಯಿಲ್ಲದೇ ಲೋಕಸಭೆಯಲ್ಲಿ ಸೋಮವಾರ ಮೂರು ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯೋದ್ಕಕೆ ಒಪ್ಪಿಗೆ ಸೂಚಿಸಲಾಗಿತ್ತು.. ಆದ್ರೇ ವಿಪಕ್ಷಗಳು ಈ ಕಾಯ್ದೆಗಳ ಕುರಿತಂತೆ ಚರ್ಚೆ ನಡೆಸೋದಕ್ಕೆ ಸಂಸತ್ ನಲ್ಲಿ ಪಟ್ಟು ಹಿಡಿದಿದ್ದವು. ಗದ್ದಲದ ನಡುವೆಯೇ ಮಸೂದೆ ಹಿಂಪಡೆಯೋದಕ್ಕೆ ಒಪ್ಪಿಗೆ ಸೂಚಿಸಲಾಗಿತ್ತು.
ಈ ಬಳಿಕ ವಿವಾದಿತ ಮೂರು ಕೃಷಿ ಮಸೂದೆಗಳ ರದ್ದತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿಯಿತು. ಮಸೂದೆಗೆ ವಿಪಕ್ಷಗಳ ಚರ್ಚೆ ನಡೆಸಬೇಕು ಎನ್ನುವ ಗದ್ದಲದ ನಡುವೆಯೂ ಅಂಗೀಕಾರ ಮಾಡಲಾಗಿದೆ. ಬಳಿಕ ಮೂರು ಕೃಷಿ ಮಸೂದೆಗಳ ರದ್ದತಿ ಮಸೂದೆಗೆ ಬುಧವಾರ ರಾಷ್ಟ್ರಪತಿ ಕೋವಿಂದ್ ಅಂಕಿತ ಹಾಕಿದ್ದಾರೆ.