Home ಟಾಪ್ ಸುದ್ದಿಗಳು ಇನ್ನು ಮುಂದೆ ಮದರಸಗಳಲ್ಲಿ ಯೋಗ ದಿನಾಚರಣೆ ಕಡ್ಡಾಯ

ಇನ್ನು ಮುಂದೆ ಮದರಸಗಳಲ್ಲಿ ಯೋಗ ದಿನಾಚರಣೆ ಕಡ್ಡಾಯ

ಲಕ್ನೋ: ಇಂದು ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ದೇಶಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಉತ್ತರ ಪ್ರದೇಶದ ಮದರಸಾ ಮಂಡಳಿಯ ಅಧೀನದಲ್ಲಿ ಬರುವ ಎಲ್ಲಾ ಅನುದಾನಿತ, ಅನುದಾನ ರಹಿತ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಎಲ್ಲಾ ಮದರಸಗಳಲ್ಲಿ ಕಡ್ಡಾಯವಾಗಿ ಯೋಗ ದಿನ ಆಚರಿಸಬೇಕು ಎಂದು ಆದೇಶಿಸಲಾಗಿದೆ.


ಆದೇಶದ ಪ್ರಕಾರ, ಮದರಸಗಳಲ್ಲಿ ಓದುತ್ತಿರುವ ಮಕ್ಕಳಿಗೆ ಯೋಗದ ಜ್ಞಾನವನ್ನು ನೀಡಲು ಜೂನ್ 21 ರಂದು ರಾಜ್ಯದ ಎಲ್ಲ ಮದರಸಗಳಲ್ಲಿ ಯೋಗ ಆಚರಿಸಬೇಕು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲು ಅಗತ್ಯವಿರುವ ವ್ಯವಸ್ಥೆಗಳನ್ನು ನೋಡಿ ಸಹಕರಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯೋಗ ದಿನವನ್ನು ಗ್ರಾಮ ಪಂಚಾಯತ್ ಗಳಿಂದ ಹಿಡಿದು ಜಿಲ್ಲಾ ಕೇಂದ್ರಗಳವರೆಗೆ ಎಲ್ಲ ಹಂತಗಳಲ್ಲಿ ಆಚರಿಸಲು ವ್ಯವಸ್ಥೆ ಮಾಡಲು ಯುಪಿ ಸರ್ಕಾರವು ಆಡಳಿತಕ್ಕೆ ಆದೇಶ ನೀಡಿದೆ.

Join Whatsapp
Exit mobile version