Home ಟಾಪ್ ಸುದ್ದಿಗಳು ಕಳಸ: ನೂತನ ಸೇತುವೆ ಕುಸಿತ; ಇಂಜಿನಿಯರ್, ಕಂಟ್ರಾಕ್ಟರ್ ವಿರುದ್ಧ ಸ್ಥಳೀಯರ ಆಕ್ರೋಶ

ಕಳಸ: ನೂತನ ಸೇತುವೆ ಕುಸಿತ; ಇಂಜಿನಿಯರ್, ಕಂಟ್ರಾಕ್ಟರ್ ವಿರುದ್ಧ ಸ್ಥಳೀಯರ ಆಕ್ರೋಶ

ಚಿಕ್ಕಮಗಳೂರು : ವಾರದ ಹಿಂದೆಯಷ್ಟೇ  ಉದ್ಘಾಟನೆಯಾದ  ಸೇತುವೆ  ಕುಸಿದು ಬಿದ್ದ ಘಟನೆ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ  ನಡೆದಿದೆ.

ಕಳಸ ತಾಲೂಕಿನ ಕೂಲಿಕಾರ್ಮಿಕ ಗಿರಿಜನರೇ ಹೆಚ್ಚಿರುವ ಗ್ರಾಮಗಳಾದ ಚೌಡಿಬಿಳಲ್, ಕಟ್ಟೆಮನೆ, ಕೊಣೆಮನೆ, ಈಚಲಹೊಳೆ ಸೇರಿದಂತೆ ಐದಾರು ಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಳೆದ ವರ್ಷದ ಅತಿವೃಷ್ಠಿಯಿಂದ ಕೊಚ್ಚಿ ಹೋಗಿತ್ತು. ನಂತರ ಈ ಸೇತುವೆಯನ್ನು 30 ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಿಸಲಾಗಿತ್ತು.

ಇದೀಗ ಕೇವಲ ಒಂದು  ಪಿಕಪ್  ಸೇತುವೆಯ ಮೇಲೆ ಸಂಚರಿಸಿದ ಪರಿಣಾಮ ಕಾಂಕ್ರೀಟ್ ಗೋಡೆಯೇ ಕಳಚಿ ಬಿದ್ದಿದೆ. ಕಂದಕಕ್ಕೆ ಬೀಳುವ ಹಂತದಲ್ಲಿದ್ದ ಪಿಕಪ್ ಅನ್ನುಸ್ಥಳೀಯರು ಹರಸಾಹಸ ಪಟ್ಟು ಮೇಲೆತ್ತಿದರು. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಗಾಡಿ ಸಂಪೂರ್ಣ ಹಾನಿಗೊಳಗಾಗುತ್ತಿತ್ತು. ಅದೃಷ್ಟವಶಾತ್ ಪಿಕಪ್ ಚಾಲಕ-ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

30 ಲಕ್ಷ ಹಣ ಒಂದೇ ವಾರಕ್ಕೆ ಮಣ್ಣುಪಾಲಾಯಿತು ಎಂದು ಸ್ಥಳೀಯರು ಇಂಜಿನಿಯರ್ಮತ್ತುಕಂಟ್ರಾಕ್ಟರ್ ವಿರುದ್ಧ ಆಕ್ರೋಶಗೊಂಡಿದ್ದಾರೆ.

Join Whatsapp
Exit mobile version