Home ಟಾಪ್ ಸುದ್ದಿಗಳು ‘ಈಗ ಅಧಿಕಾರಿಗಳೂ ಕ್ಯಾರೇ ಅಂತಿಲ್ಲ’ : ಸಿದ್ದರಾಮಯ್ಯಗೆ ಮತ್ತೆ ಪತ್ರ ಬರೆದ ಶಾಸಕ ಬಸವರಾಜ ರಾಯರೆಡ್ಡಿ

‘ಈಗ ಅಧಿಕಾರಿಗಳೂ ಕ್ಯಾರೇ ಅಂತಿಲ್ಲ’ : ಸಿದ್ದರಾಮಯ್ಯಗೆ ಮತ್ತೆ ಪತ್ರ ಬರೆದ ಶಾಸಕ ಬಸವರಾಜ ರಾಯರೆಡ್ಡಿ

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ‌ ಮತ್ತೊಮ್ಮೆ ತಮ್ಮದೇ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಶಾಸಕ ರಾಯರೆಡ್ಡಿ, ಜೆಸ್ಕಾಂ ಅಧಿಕಾರಿಗಳು ಹಾಗೂ ಇಂಧನ ಸಚಿವರ ಸಭೆ ಕರೆಯಲು ಅವರು ಒತ್ತಾಯ ಮಾಡಿದ್ದಾರೆ.

ಹಿರಿಯ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ತಮ್ಮ ಅಧೀನ ಕಿರಿಯ ಅಧಿಕಾರಿಗಳ ಮಾತನ್ನೂ ಕೇಳುತ್ತಿಲ್ಲ. ಕಿರಿಯರು ಕೆಲಸಗಳು ಆಗದೆ ಅಸಹಾಯಕತೆ ತೋಡಿಕೊಂಡಿದ್ದಾರೆ. ನನ್ನ ಸೂಚನೆಗೂ ಹಿರಿಯರು ಕ್ಯಾರೇ ಅನ್ನುತ್ತಿಲ್ಲ ಎಂಬುದಾಗಿ ಶಾಸಕ ರಾಯರೆಡ್ಡಿ ಪತ್ರದ ಮೂಲಕ ಸಿಎಂ ಗಮನ ಸೆಳೆದಿದ್ದಾರೆ.

ಅತ್ಯಂತ ಹಿರಿಯರಾದ ತಮಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ಮುನಿಸುಕೊಂಡಿರುವ ಶಾಸಕ ರಾಯರೆಡ್ಡಿ ಇತ್ತೀಚೆಗೆ ಕಾಂಗ್ರೆಸ್​ ಶಾಸಕಾಂಗ ಪಕ್ಷದ (CLP) ಸಭೆಗೆ ಒತ್ತಾಯಿಸಿ ಸಹಿ ಸಂಗ್ರಹಿಸಿದ್ದರು. ಅದರಂತೆ ಸಭೆ ಆಯೋಜಿಸುವಂತೆಯೂ ನೋಡಿಕೊಂಡಿದ್ದರು. ಆಗ, ಸಚಿವರು ನಮ್ಮ ಮಾತು ಕೇಳುತ್ತಿಲ್ಲ ಸಭೆ ಕರೆಯಿರಿ ಎಂದು ಸಿಎಂ ಸಿದ್ದರಾಮಯ್ಯ ಬಳಿ ದೂರಿದ್ದರು.

Join Whatsapp
Exit mobile version