Home ಟಾಪ್ ಸುದ್ದಿಗಳು ಏಳು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ | ಅಸಮಾಧಾನದ ಅಲೆಯ ನಡುವೆಯೂ ಯಡಿಯೂರಪ್ಪ ಸಂಪುಟ...

ಏಳು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ | ಅಸಮಾಧಾನದ ಅಲೆಯ ನಡುವೆಯೂ ಯಡಿಯೂರಪ್ಪ ಸಂಪುಟ ವಿಸ್ತರಣೆ

ಬೆಂಗಳೂರು : ಸಿಎಂ ಯಡಿಯೂರಪ್ಪ ಸಚಿವ ಸಂಪುಟದ ವಿಸ್ತರಣೆ ಸಮಾರಂಭ ರಾಜಭವನದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಅದ್ದೂರಿಯಾಗಿ ನಡೆಯಿತು. ನೂತನ ಸಚಿವರಿಗೆ ರಾಜ್ಯಪಾಲ ವಿ.ಆರ್. ವಾಲಾ ಪ್ರಮಾಣ ವಚನ ಬೋಧಿಸಿದರು.

ಸಿ.ಪಿ. ಯೋಗೇಶ್ವರ್, ಅಂಗಾರ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್, ಶಂಕರ್, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಮುಂತಾದವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಮೊದಲು ಉಮೇಶ್ ಕತ್ತಿ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂಪುಟ ದರ್ಜೆ ಸಚಿವರಾಗಿ ಉಮೇಶ್ ಕತ್ತಿ ಪ್ರಮಾಣ ವಚನ ಸ್ವೀಕರಿಸಿದರು. ದೇವರು ಮತ್ತು ರೈತರ ಹೆಸರಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಕತ್ತಿ ಅವರು ಕೇಸರಿ ಕೋಟ್ ಧರಿಸಿ ಗಮನ ಸೆಳೆದರು.

ನಂತರ ಅರವಿಂದ ಲಿಂಬಾವಳಿ ಅವರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಲಿಂಬಾವಳಿ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕೇಸರಿ ಶಾಲು ಮತ್ತು ಕೋಟ್ ಧರಿಸಿ ಅವರು ಗಮನ ಸೆಳೆದರು.

ಎಂಟಿಬಿ ನಾಗರಾಜ್ ಅವರೂ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿ ಧ್ವಜದ ಬಣ್ಣವಾದ ಕೇಸರಿ, ಹಸಿರು ಶಾಲು ಧರಿಸಿ ಪ್ರಮಾಣ ವಚನ ಸ್ವೀಕರಿಸಿದರು.

ಮುರುಗೇಶ್ ನಿರಾನಿ ಅವರು ದೇವರ ಮತ್ತು ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಸಚಿವ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೇಸರಿ ಅಂಗಿ, ಕೇಸರಿ ಶಾಲು ಧರಿಸಿ ಪ್ರಮಾಣ ವಚನ ಸ್ವೀಕರಿಸಿದರು.

ಆರ್. ಶಂಕರ್ ಅವರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಹಸಿರು ಶಾಲು ಧರಿಸಿ ಶಂಕರ್ ಪ್ರಮಾಣ ವಚನ ಸ್ವೀಕರಿಸಿದರು.

ಸಿ.ಪಿ. ಯೋಗೇಶ್ವರ್ ಅವರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೇಸರಿ ಶಾಲು ಧರಿಸಿ ಅವರು ಪ್ರಮಾಣ ವಚನ ಸ್ವೀಕರಿಸಿದರು.

ಕೊನೆಯದಾಗಿ, ಸುಳ್ಯ ಶಾಸಕ ಎಸ್. ಅಂಗಾರ ಅವರು ಪ್ರಮಾಣ ವಚನ ಸ್ವೀಕರಿಸಿದರು. ದೇವರ ಹೆಸರಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಕೇಸರಿ ಶಾಲು ಧರಿಸಿ ಅವರು ಪ್ರಮಾಣವಚನ ಸ್ವೀಕರಿಸಿದರು. ಅಂಗಾರ ಪ್ರಮಾಣ ವಚನ ಸ್ವೀಕರಿಸಿದಾಗ ಅವರ ಪರವಾಗಿ ಕಾರ್ಯಕರ್ತರ ನಡುವೆ ಹರ್ಷೋದ್ಘಾರ, ಘೋಷಣೆಗಳು ಮೊಳಗಿದವು.

ಸುಮಾರು 12 ಶಾಸಕರು, ಮುಖಂಡರ ತೀವ್ರ ಅಸಮಾಧಾನ, ಆರೋಪಗಳ ನಡುವೆಯೇ ಸಚಿವ ಸಂಪುಟ ವಿಸ್ತರಣೆ ಸಮಾರಂಭ ನಡೆಯಿತು. ಎಚ್. ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಪ್ರಮುಖ ನಾಯಕರು ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ, ಸಚಿವ ಸಂಪುಟ ವಿಸ್ತರಣೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಮಾಣವಚನ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತಿತರ ಪ್ರಮುಖರು, ಸಚಿವರು ಈ ವೇಳೆ ಉಪಸ್ಥಿತರಿದ್ದರು.

ಸಚಿವ ಸ್ಥಾನ ಸ್ವೀಕರಿಸಿದ ಬಹುತೇಕ ಶಾಸಕರು ಕೇಸರಿ ಶಾಲು ಧರಿಸಿದ್ದರು. ಕೆಲವರು ಕೇಸರಿ ಬಟ್ಟೆಗಳನ್ನು ಧರಿಸಿ ಸಂಭ್ರಮಿಸಿದರು. ಆರ್ ಶಂಕರ್ ಅವರು ಹಸಿರು ಶಾಲು ಧರಿಸಿ ಕಂಡುಬಂದರು.

ಮೊದಲ ಬಾರಿ ಸಚಿವರಾಗುತ್ತಿರುವ ಸುಳ್ಯ ಶಾಸಕ ಅಂಗಾರ ಬಿಳಿ ಅಂಗಿ, ಕಪ್ಪು ಪ್ಯಾಂಟ್ ಧರಿಸಿ ಬಂದಿದ್ದರು. ಸಭಾಂಗಣದಲ್ಲಿದ್ದವರಲ್ಲಿ ಹಿರಿಯ ಮುಖಂಡರೊಬ್ಬರು ಅವರಿಗೂ ಕೇಸರಿ ಶಾಲು ಹಾಕಿಸಿದರು.   

Join Whatsapp
Exit mobile version