Home ಟಾಪ್ ಸುದ್ದಿಗಳು ನಾನು ಕಟ್ಟಾ RSS ಅನುಯಾಯಿ | ನಾನು ಈ ಸ್ಥಾನಕ್ಕೆ ಬರಲು ಸಂಘವೇ ಕಾರಣ

ನಾನು ಕಟ್ಟಾ RSS ಅನುಯಾಯಿ | ನಾನು ಈ ಸ್ಥಾನಕ್ಕೆ ಬರಲು ಸಂಘವೇ ಕಾರಣ

ನಾನು ಕಟ್ಟಾ ಆರ್ ಎಸ್ ಎಸ್ ಅನುಯಾಯಿ. ಇಂದು ನಾನು ಈ ಸ್ಥಾನಕ್ಕೆ ಬರಲು RSS ಕಾರಣ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಆರ್ ಎಸ್ ಎಸ್ ಸಿದ್ಧಾಂತವನ್ನು ನಾನು ಕಲಿತಿದ್ದೇನೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಕೂಡ ಆರ್ ಎಸ್ ಎಸ್ ಕಾರಣ. ಸ್ವತಃ ಮೋದಿಯವರೇ ನಾನು RSSನಿಂದ ಬಂದವನು ಎಂದು ಹೇಳಿರುವಾಗ ನಾನೂ ಆರ್ ಎಸ್ ಎಸ್, ಅದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.


ಕಾಂಗ್ರೆಸ್ ನಾಯಕರಿಗೆ ಇತ್ತೀಚೆಗೆ ಎಲ್ಲದಕ್ಕೂ ಆರ್. ಎಸ್ಎ ಸ್ ಬಗ್ಗೆ ಹೇಳಿಕೊಂಡು ತಿರುಗಾಡುವುದೇ ಅಭ್ಯಾಸವಾಗಿದೆ. ಪ್ರತಿ ದಿನ ಅವರಿಗೆ RSS ಬಗ್ಗೆ ಟೀಕೆ ಮಾಡುವುದೇ ಕಾಯಕ. ಎಲ್ಲದಕ್ಕೂ RSS ಕಾರಣ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಆರ್ ಎಸ್ ಎಸ್ ಬಗ್ಗೆ ಮಾತಾಡುವ ಮೊದಲು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಯಾವ ಹಿನ್ನಲೆಯಿಂದ ಬಂದಿದ್ದಾರೆ ಎಂಬುವುದನ್ನು ತಿಳಿದುಕೊಂಡು ಆ ಮೇಲೆ ಮಾತಾಡಲಿ ಎಂದು ತಿರುಗೇಟು ನೀಡಿದರು.

Join Whatsapp
Exit mobile version