Home ಟಾಪ್ ಸುದ್ದಿಗಳು ಭಾರತದಲ್ಲಿ ಪ್ರಜಾಪ್ರಭುತ್ವ ತೀವ್ರ ಕುಸಿತ ಕಂಡಿದೆ : ಅಮೆರಿಕಾದ ಫ್ರೀಡಮ್ ಹೌಸ್ ವರದಿ

ಭಾರತದಲ್ಲಿ ಪ್ರಜಾಪ್ರಭುತ್ವ ತೀವ್ರ ಕುಸಿತ ಕಂಡಿದೆ : ಅಮೆರಿಕಾದ ಫ್ರೀಡಮ್ ಹೌಸ್ ವರದಿ

ಅಮೇರಿಕಾ ಸರ್ಕಾರದ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಫ್ರೀಡಂ ಹೌಸ್ ಸಮೀಕ್ಷೆ ಪ್ರಕಾರ ಭಾರತದಲ್ಲಿ ಪ್ರಜಾಪ್ರಭುತ್ವ ಕುಸಿದಿದೆ ಎಂದು ವರದಿ ಮಾಡಿದೆ. ಈ ಸಂಶೋಧನಾ ತಂಡದ ಪ್ರಕಾರ ಭಾರತದಲ್ಲಿ ‘ಅಂಶಿಕ ಸ್ವಾತಂತ್ರ್ಯ ಮಾತ್ರವಿದೆ ಎಂದು ಹೇಳಿದ್ದು, 1997 ರ ಬಳಿಕ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ದೇಶದ ಸ್ಥಾನಮಾನ ಕುಸಿದಿದೆ.

https://twitter.com/freedomhouse/status/1367135204285022212

ಪ್ರಧಾನಿ ನರೇಂದ್ರ ಮೋದಿ ಆಡಳಿತವು ನಾಗರಿಕರ ಹಕ್ಕುಗಳನ್ನು ಹತ್ತಿಕ್ಕುತ್ತಿದೆ ಎಂದು ಫ್ರೀಡಂ ಹೌಸ್ ಹೇಳಿದೆ. ಸರ್ಕಾರದ ವಿಮರ್ಶಾಕಾರರ ಮೇಲೆ ಸಂವಿಧಾನಾತ್ಮಕ ಸಂಸ್ಥೆಯನ್ನು ಬಳಸಿ ದಾಳಿ ನಡೆಸುವುದು, ಪತ್ರಕರ್ತರಿಗೆ ನೀಡುವ ಕಿರುಕುಳ ಮತ್ತು ಮುಸ್ಲಿಂ ನಾಗರಿಕರ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಶೋಷಣೆಯಿಂದಾಗಿ ಜಗತ್ತಿನ ಅತಿದೊಡ್ದ ಪ್ರಜಾಸತ್ತತೆಯ ರ್ಯಾಂಕಿಂಗ್ ಈ ಬಾರಿ ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.

Join Whatsapp
Exit mobile version