Home ಟಾಪ್ ಸುದ್ದಿಗಳು ಸಾಹಿತಿಗಳಿಂದ ರಾಜ್ಯದಲ್ಲಿ ಗೊಂದಲ ಸೃಷ್ಟಿ: ಕೆ.ಎಸ್. ಈಶ್ವರಪ್ಪ

ಸಾಹಿತಿಗಳಿಂದ ರಾಜ್ಯದಲ್ಲಿ ಗೊಂದಲ ಸೃಷ್ಟಿ: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ಕೆಲವು ಸಾಹಿತಿಗಳಿಂದ ರಾಜ್ಯದಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂಬತ್ತು ಸಾಹಿತಿಗಳು ನಮ್ಮ ಪಠ್ಯ ಬೇಡ ಎಂದು ಪತ್ರ ಬರೆದಿದ್ದಾರೆ. ಅದರಲ್ಲಿ ಏಳು ಜನರ ವಿಚಾರವನ್ನು ಪಠ್ಯದಲ್ಲಿ ಹಾಕಲೇ ಇಲ್ಲ. ಇದರಲ್ಲಿ ಎಷ್ಟು ರಾಜಕಾರಣ ಇದೆ ನೋಡಿ ಎಂದರು.

ಹಿಂದೆ ಬರಗೂರು ರಾಮಚಂದ್ರಪ್ಪ ಅಧ್ಯಕ್ಷರಾದ ಅವಧಿಯಲ್ಲಿ ಅವರ ವಿಚಾರಕ್ಕೆ ತಕ್ಕಂತೆ ಪಠ್ಯಪುಸ್ತಕಗಳನ್ನು ತಂದಿದ್ದರು. ಇವತ್ತು ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಯಾವುದು ಸರಿ ಇಲ್ಲ ಎಂಬ ಅಂಶದ ಬಗ್ಗೆ ಪ್ರಮಾಣಿಕವಾಗಿ ಎಂದು ಹೇಳಿ ತಿದ್ದಿಸಬೇಕಿತ್ತು. ಇದರಲ್ಲಿ ರಾಜಕೀಯ ತಂದು, ಅವರ ವೈಚಾರಿಕ ಸಿದ್ಧಾಂತಗಳನ್ನು ಇಲ್ಲಿಗೆ ತರಬಾರದು. ಆ ಮೂಲಕ ರಾಜ್ಯದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಕೆಲವು ಸಾಹಿತಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Join Whatsapp
Exit mobile version