Home ಟಾಪ್ ಸುದ್ದಿಗಳು ಪ್ರವಾದಿ ನಿಂದನೆ: ಭಾರತೀಯ ಉತ್ಪನ್ನಗಳನ್ನು ತೆರವುಗೊಳಿಸಿದ ಕುವೈತ್ ಸೂಪರ್ ಮಾರ್ಕೆಟ್ !

ಪ್ರವಾದಿ ನಿಂದನೆ: ಭಾರತೀಯ ಉತ್ಪನ್ನಗಳನ್ನು ತೆರವುಗೊಳಿಸಿದ ಕುವೈತ್ ಸೂಪರ್ ಮಾರ್ಕೆಟ್ !

ಕುವೈತ್: ಪ್ರವಾದಿ ನಿಂದನೆಗೈದ ಬಿಜೆಪಿ ನಾಯಕರ ವಿರುದ್ಧ ಗಲ್ಫ್ ರಾಷ್ಟ್ರಗಳ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ಕುವೈತ್’ನ ಸೂಪರ್ ಮಾರ್ಕೆಟ್’ನಲ್ಲಿ ಇರಿಸಲಾಗಿದ್ದ ಭಾರತೀಯ ಉತ್ಪನ್ನಗಳನ್ನು ತೆರವುಗೊಳಿಸಲಾಗಿದೆ. ಕಳೆದ ದಿನವಷ್ಟೇ ಕುವೈತ್ ನಲ್ಲಿರುವ ಭಾರತೀಯ ರಾಯಭಾರಿಗೆ ಸಮನ್ಸ್ ಅನ್ನು ನೀಡಲಾಗಿತ್ತು. ಇದಾದ ಬಳಿಕ ಇಂದು ಸೂಪರ್ ಮಾರ್ಕೆಟ್’ನಲ್ಲಿ ಮೇಡ್ ಇನ್ ಇಂಡಿಯಾ’ ಉತ್ಪನ್ನಗಳನ್ನು ತೆರವುಗೊಳಿಸಲಾಗಿದೆ.

ಮೇಡ್ ಇನ್ ಇಂಡಿಯಾ ಉತ್ಪನ್ನಗಳಾದ ಟೀ ಮತ್ತಿತರ ವಸ್ತುಗಳನ್ನು ಕುವೈತ್‌ನ ಅಲ್ – ಅರ್ದಿಯಾ ಸೂಪರ್ ಮಾರ್ಕೆಟ್’ನಲ್ಲಿ ಮಾರಾಟಕ್ಕೆ ಇರಿಸಲಾಗಿತ್ತು. ಬಿಜೆಪಿ ವಕ್ತಾರೆ ನುಪೂರ್ ಶರ್ಮಾ ಸೇರಿದಂತೆ ಕೆಲ ನಾಯಕರು ಪ್ರವಾದಿ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿ ಅವಹೇಳನ ಮಾಡಿದ್ದರು. ಇದರ ವಿರುದ್ಧ ವಿಶ್ವದಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ಘಟನೆಯ ಮುಂದುವರಿದ ಭಾಗವಾಗಿ ಇದೀಗ ಕುವೈತ್ ನ ಅಲ್ – ಅರ್ದಿಯಾ ಸೂಪರ್ ಮಾರ್ಕೆಟ್’ನಲ್ಲಿ ಇರಿಸಲಾಗಿದ್ದ ಎಲ್ಲಾ ಭಾರತೀಯ ಉತ್ಪನ್ನಗಳನ್ನು ಟ್ರಾಲಿಗೆ ಹಾಕಿ ತೆರವುಗೊಳಿಸಲಾಗಿದೆ.

ಕತರ್ ಸೇರಿದಂತೆ ಸೌದಿ ಅರೇಬಿಯಾ, ಇರಾನ್, ಒಮಾನ್, ಪಾಕಿಸ್ತಾನ ಸೇರಿದಂತೆ ಅನೇಕ ಮುಸ್ಲಿಂ ರಾಷ್ಟ್ರಗಳು ಪ್ರವಾದಿ ಅವಹೇಳನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಕೆಲ ರಾಷ್ಟ್ರಗಳು ತನ್ನ ಭಾರತೀಯ ರಾಯಭಾರಿಗಳನ್ನು ಕರೆಸಿ ಸ್ಪಷ್ಟನೆಯನ್ನೂ ಕೇಳಿತ್ತು.

Join Whatsapp
Exit mobile version