Home ಟಾಪ್ ಸುದ್ದಿಗಳು ಸಂಸದರಿಗೆ ನೀಡಿದ ಸಂವಿಧಾನದ ಪ್ರತಿಗಳಲ್ಲಿ ‘ಜಾತ್ಯತೀತ’, ‘ಸಮಾಜವಾದಿ’ ಪದಗಳು ಕಣ್ಮರೆ: ಅಧೀರ್ ರಂಜನ್ ಚೌಧರಿ

ಸಂಸದರಿಗೆ ನೀಡಿದ ಸಂವಿಧಾನದ ಪ್ರತಿಗಳಲ್ಲಿ ‘ಜಾತ್ಯತೀತ’, ‘ಸಮಾಜವಾದಿ’ ಪದಗಳು ಕಣ್ಮರೆ: ಅಧೀರ್ ರಂಜನ್ ಚೌಧರಿ

ನವದೆಹಲಿ: ಹೊಸ ಸಂಸತ್ ಭವನದ ಉದ್ಘಾಟನಾ ದಿನದಂದು ಸಂಸದರಿಗೆ ನೀಡಿದ ಸಂವಿಧಾನದ ಪ್ರತಿಗಳಲ್ಲಿನ ಪ್ರಸ್ತಾವನೆಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳು ನಾಪತ್ತೆಯಾಗಿವೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬುಧವಾರ ಆರೋಪಿಸಿದ್ದಾರೆ.


‘ನಾವು ಹೊಸ ಸಂಸತ್ ಕಟ್ಟಡಕ್ಕೆ ಕೊಂಡೊಯ್ದ ಸಂವಿಧಾನದ ಪ್ರಸ್ತಾವನೆಯ ಪ್ರತಿಯಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಎನ್ನುವ ಪದಗಳಿಲ್ಲ. ಅವುಗಳನ್ನು ಜಾಣತನದಿಂದ ತೆಗೆದುಹಾಕಲಾಗಿದೆ. ಇದು ಗಂಭೀರ ವಿಷಯ ಮತ್ತು ನಾವು ಸದನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸುತ್ತೇವೆ. ಈ ಪದಗಳನ್ನು 1976ರಲ್ಲಿ ಸಂವಿಧಾನಕ್ಕೆ ಸೇರಿಸಲಾಯಿತು ಎಂಬುದು ನನಗೆ ತಿಳಿದಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.


ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮಾತನಾಡಿ, ಸಂವಿಧಾನದ ಪ್ರಸ್ತಾವನೆಯು ಮೂಲ ಆವೃತ್ತಿಯನ್ನು ಹೊಂದಿದ್ದು, ಸಂವಿಧಾನಾತ್ಮಕ ತಿದ್ದುಪಡಿಗಳ ನಂತರ ಈ ಉಲ್ಲೇಖಿತ ನಿರ್ದಿಷ್ಟ ಪದಗಳನ್ನು ಸೇರಿಸಲಾಯಿತು. ಮೂಲಭೂತವಾಗಿ, ತಿದ್ದುಪಡಿ ಪ್ರಕ್ರಿಯೆಯ ಮೂಲಕ ಸಂವಿಧಾನದ ಪ್ರಸ್ತಾವನೆಗೆ ಸೇರಿಸಲಾದ ಹೆಚ್ಚುವರಿ ಪದಗಳನ್ನು ಈ ಪ್ರತಿಗಳು ಒಳಗೊಂಡಿಲ್ಲ ಎಂದು ಹೇಳಿದರು.

Join Whatsapp
Exit mobile version