Home ಟಾಪ್ ಸುದ್ದಿಗಳು ಕತ್ತಲಾದ ಮೇಲೆ ಮಹಿಳೆಯರು ಪೊಲೀಸ್ ಠಾಣೆಗೆ ಹೋಗಬೇಡಿ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ಮೌರ್ಯ

ಕತ್ತಲಾದ ಮೇಲೆ ಮಹಿಳೆಯರು ಪೊಲೀಸ್ ಠಾಣೆಗೆ ಹೋಗಬೇಡಿ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ಮೌರ್ಯ

ಲಖನೌ: ಕತ್ತಲಾದ ನಂತರ ಪೊಲೀಸ್ ಠಾಣೆಗಳಿಗೆ ಮಹಿಳೆಯರು ಹೋಗಬಾರದು ಎಂದು ಉತ್ತರಾಖಂಡದ ಮಾಜಿ ರಾಜ್ಯಪಾಲೆ ಹಾಗೂ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ ಬೇಬಿ ರಾಣಿ ಮೌರ್ಯ ಹೇಳಿದ್ದಾರೆ. ಇವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಾಣಸಿ ಕ್ಷೇತ್ರದಲ್ಲಿ ಸಂತ ರವಿದಾಸ್ ಮಂಡಲದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಮೌರ್ಯ ಪಾಲ್ಗೊಂಡು ಮಾತನಾಡಿದ್ದರು. ‘ಪೊಲೀಸ್ ಠಾಣೆಯಲ್ಲಿ ಮಹಿಳಾ ಅಧಿಕಾರಿಗಳು ಇದ್ದರೂ, ಮಹಿಳೆಯರು ಮುಸ್ಸಂಜೆ ಅಥವಾ ಸಂಜೆಯ ನಂತರ ಪೊಲೀಸ್ ಠಾಣೆಗೆ ಹೋಗಬಾರದು. ಅಗತ್ಯವಿದ್ದರೆ, ತಂದೆ-ಸಹೋದರ, ಪತಿ ಜತೆ ಮಾತ್ರ ಅಲ್ಲಿಗೆ ಹೋಗಬೇಕು ಎಂದಿದ್ದರು.

ಬೇಬಿ ರಾಣಿ ಮೌರ್ಯ ಅವರ ಈ ಹೇಳಿಕೆಯನ್ನು ಕಾಂಗ್ರೆಸ್​ನ ರಾಜ್ಯ ವಕ್ತಾರ ಅಂಶು ಅವಸ್ಥಿ ಟೀಕಿಸಿದ್ದು, ಬೇಬಿಯವರ ಈ ಹೇಳಿಕೆ ಬಿಜೆಪಿ ಮತ್ತು ಆರ್​ಎಸ್​​ಎಸ್​ನ ಮನಸ್ಥಿತಿಯನ್ನು ಬಿಂಬಿಸುತ್ತದೆ. ಮಹಿಳೆಯರು ಐದು ಗಂಟೆಯ ನಂತರ ಯಾಕೆ ಠಾಣೆಗಳಿಗೆ ಹೋಗಬಾರದು? ರಾಜ್ಯದಲ್ಲಿ ಜಂಗಲ್ ರಾಜ್ ಸರ್ಕಾರ ಚಾಲ್ತಿಯಲ್ಲಿದೆಯೇ ಎಂದು ವಾಗ್ದಾಳಿ ನಡೆಸಿದ್ದಾರೆ.

. ‘ಪೊಲೀಸ್ ಠಾಣೆಯಲ್ಲಿ ಮಹಿಳಾ ಅಧಿಕಾರಿಗಳು ಇದ್ದರೂ, ಮಹಿಳೆಯರು ಮುಸ್ಸಂಜೆ ಅಥವಾ ಐದು ಗಂಟೆಯ ನಂತರ ಪೊಲೀಸ್ ಠಾಣೆಗೆ ಹೋಗಬಾರದು. ಅಗತ್ಯವಿದ್ದರೆ, ತಂದೆ-ಸಹೋದರ, ಪತಿ ಜತೆ ಮಾತ್ರ ಅಲ್ಲಿಗೆ ಹೋಗಬೇಕು ಎಂದಿದ್ದರು.  

Join Whatsapp
Exit mobile version