ವಿಮೆನ್ ಇಂಡಿಯಾ ಮೂವ್ಮೆಂಟ್ ಸದಸ್ಯತ್ವ ಅಭಿಯಾನ

Prasthutha|

ಬೆಂಗಳೂರು:’ಘನತೆಯ ಸಮಾಜಕ್ಕಾಗಿ ಒಂದಾಗೋಣ’ ಎಂಬ ಘೋಷವಾಕ್ಯದೊಂದಿಗೆ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಸದಸ್ಯತ್ವ ಅಭಿಯಾನವು ಜುಲೈ ತಿಂಗಳಿನಲ್ಲಿ ನಡೆಯುತ್ತಿದೆ.

- Advertisement -

ಅಶಕ್ತರಿಗೆ ಶಕ್ತಿಯಾಗಿ, ಶೋಷಿತರ ಆಶಾಕಿರಣವಾಗಿ ಸಾರ್ವಜನಿಕ ರಂಗದಲ್ಲಿ ಸಕ್ರಿಯವಾಗಿದ್ದು, ಅನ್ಯಾಯ ಅಕ್ರಮಗಳ ವಿರುದ್ಧದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುವ ಈ ಮಹಿಳಾ ಸಂಘಟನೆಯಾದ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರಾದ್ಯಂತ ಕಾರ್ಯಾಚರಿಸುತ್ತಿದೆ. ಇದತ ಸದಸ್ಯತ್ವ ಅಭಿಯಾನವು ಈಗಾಗಲೇ ಚಾಲ್ತಿಯಲ್ಲಿದೆ. ಮಹಿಳೆಯ ಘನತೆ, ಗೌರವಕ್ಕೆ ಧಕ್ಕೆ ತರುವಂತಹ ಸನ್ನಿವೇಶಗಳು ನಿರ್ಮಾಣವಾದ ಪ್ರತಿಯೊಂದು ಸಂದರ್ಭದಲ್ಲೂ ಜಾತಿ ಧರ್ಮಗಳ ತಾರತಮ್ಯವಿಲ್ಲದೆ ಮಹಿಳಾ ಪರ ಗಟ್ಟಿ ಧ್ವನಿಯಾಗಿ, ಆಕೆಗೆ ಆಸರೆಯಾಗುವಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ನ ಕಾರ್ಯಯೋಜನೆಗಳು ಸಫಲತೆಯನ್ನು ಕಂಡಿರುತ್ತದೆ.

ಮಹಿಳೆಯರನ್ನು ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಸಬಲೀಕರಣ ಗೊಳಿಸುವ, ಅವರಿಗಾಗುತ್ತಿರುವ ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಹಾಗೂ ಎಲ್ಲಾ ಧರ್ಮದ ಮಹಿಳೆಯರ ಸಂವಿಧಾನಿಕ ಹಕ್ಕನ್ನು ಪಡೆದುಕೊಳ್ಳಲು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಮಹಿಳೆಯರನ್ನು ಸಂಘಟಿಸುವ ಕೆಲಸವನ್ನು ನಡೆಸುತ್ತಾ ಬಂದಿರುತ್ತದೆ. ಸಾಂವಿಧಾನಿಕ ಹೋರಾಟಗಳು ಶೈಕ್ಷಣಿಕ, ಆರ್ಥಿಕ ,ರಾಜಕೀಯ ಪ್ರಬುದ್ಧತೆಯ ಮೂಲಕ ಸಬಲೀಕರಣ ಸಾಧ್ಯವೆಂಬುದನ್ನು ನಾವು ನಂಬಿರುತ್ತೇವೆ. ಆದ್ದರಿಂದ ವಿಮೆನ್ ಇಂಡಿಯಾ ಮೂವ್ಮೆಂಟ್‌ನ ಸದಸ್ಯತ್ವ ಅಭಿಯಾನದ ಅವಕಾಶವನ್ನು ಪ್ರತಿಯೊಬ್ಬ ಮಹಿಳೆಯರು ಸದುಪಯೋಗ ಪಡೆದುಕೊಂಡು ಸದೃಢ ಸಮಾಜವನ್ನು ನಿರ್ಮಿಸುವಲ್ಲಿ ಕೈಜೋಡಿಸಬೇಕೆಂದು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp
Exit mobile version