Home ಟಾಪ್ ಸುದ್ದಿಗಳು ಈ ಗ್ರಾಮದಲ್ಲಿನ್ನು ಮಹಿಳೆಯರು ಜೀನ್ಸ್ ಧರಿಸುವಂತಿಲ್ಲ !

ಈ ಗ್ರಾಮದಲ್ಲಿನ್ನು ಮಹಿಳೆಯರು ಜೀನ್ಸ್ ಧರಿಸುವಂತಿಲ್ಲ !

ಮುಜಾಫ‌ರ್‌ನಗರ: ಉತ್ತರ ಪ್ರದೇಶದ ಮುಜಾಫ್ಫರ್ನಗರ ಜಿಲ್ಲೆಯ ಖಾಪ್ ಪಂಚಾಯತ್ ಮಹಿಳೆಯರಿಗೆ ಜೀನ್ಸ್ ಧರಿಸುವುದನ್ನು ನಿರ್ಬಂಧಿಸಿದೆ.

‘ಜೀನ್ಸ್ ಉಡುಗೆಯು ಪಾಶ್ಚಿಮಾತ್ಯ ಸಂಸ್ಕೃತಿಯ ಭಾಗವಾಗಿದೆ. ಇದರ ಬದಲು ಜನರು ಭಾರತೀಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು’ ಎಂದು ಖಾಪ್ ಪಂಚಾಯತ್ ಸಲಹೆ ನೀಡಿದೆ.

ಛಾತ್ರ್‌ವಾಲ್ ಪೊಲೀಸ್ ಠಾಣೆಯ ವ್ಯಾಪ್ತಿಯ ಪಿಪಲ್‌ಷಾ ಗ್ರಾಮದಲ್ಲಿ ಮಾರ್ಚ್ 2ರಂದು ಪಂಚಾಯತ್ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಖಾಪ್ ಪಂಚಾಯತ್‌ನ ನಿರ್ಧಾರವನ್ನು ತಿಳಿಸಿದ ಸಮುದಾಯದ ಮುಖಂಡ ಹಾಗೂ ಕಿಸಾನ್ ಸಂಘದ ಮುಖ್ಯಸ್ಥ ಠಾಕೂರ್ ಪುರಣ್ ಸಿಂಗ್ ‘ಮಹಿಳೆಯರು ಜೀನ್ಸ್ ಧರಿಸುವುದನ್ನು ನಿಷೇಧಿಸಲಾಗಿದೆ. ಜೀನ್ಸ್ ಪಾಶ್ಚಾತ್ಯ ಸಂಸ್ಕೃತಿಯ ಉಡುಗೆ. ಅದರ ಬದಲಾಗಿ ಸಾಂಪ್ರದಾಯಿಕ ಉಡುಗೆಗಳಾದ ಸೀರೆ, ಘಾಘ್ರಾ ಮತ್ತು ಸಲ್ವಾರ್ ಕಮೀಜ್ ಧರಿಸಬೇಕು. ಈ ಆಜ್ಞೆಯನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ನೀಡಲಾಗುವುದು ಅಲ್ಲದೇ, ಸಮುದಾಯದಿಂದ ಬಹಿಷ್ಕಾರವನ್ನೂ ಹಾಕಲಾಗುವುದು’ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

Join Whatsapp
Exit mobile version