ಮೈಸೂರು: ಮೈಸೂರಿನ ಮದರ್ ಹುಡ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮಾಮೂಲಿ ಹೆರಿಗೆಯಾಗಿ 4 ಕಿಲೋ ಭಾರದ ಮಗುವಿಗೆ ಜನ್ಮನೀಡಿದ್ದಾರೆ.
ಭಾರತದಲ್ಲಿ 2.5ರಿಂದ 3.5 ಕಿಲೋ ಒಳಗಿನ ಮಕ್ಕಳು ಹುಟ್ಟುವುದು ಸಹಜ.
ಇದು ದಂಪತಿಯ ಮೊದಲ ಮಗು. ಆಕೆ ಆರಂಭದಿಂದಲೂ ಚೆಕಪ್ ಮಾಡಿಸಿಕೊಳ್ಳುತ್ತಿದ್ದಳು. ಎಲ್ಲ ಸ್ಕ್ಯಾನ್’ಗಳೂ ಸಹಜವಿದ್ದವು. ಇಂತಹ ಮಗು ಗಾಯದೊಡನೆ ಹುಟ್ಟುವುದು, ತಾಯಿಗೆ ತೊಂದರೆಯ ಹೆರಿಗೆಯಾಗಿರುವುದು ಎಲ್ಲ ಇರುತ್ತದೆ. ಆದರೆ ಇದರಲ್ಲಿ ಅಂತಹದ್ದು ಯಾವುದೂ ಕಂಡುಬಂದಿಲ್ಲ. ಸಹಜ ಹೆರಿಗೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವೈದ್ಯರಾದ ಹೆರಿಗೆ ತಜ್ಞೆ ಶ್ವೇತಾ ನಾಯಕ್, ನವಜಾತ ಶಿಶು ತಜ್ಞ ಚೇತನ್ ಈ ನಿಟ್ಟಿನಲ್ಲಿ ಸೂಕ್ತ ತಪಾಸಣೆಗಳನ್ನು ನಡೆಸಿದ್ದರು. ಮಧುಮೇಹ ರೋಗವಿರುವ ತಾಯಂದಿರಿಗೆ ಹೆಚ್ಚು ತೂಕದ ಮಗು ಹುಟ್ಟುವುದಿರುತ್ತದೆ. ಆದರೆ ಆರೋಗ್ಯದೊಡನೆ ಹುಟ್ಟುವುದು ಕಡಿಮೆ. ಇಲ್ಲಿ ತಾಯಿ ಮಧುಮೇಹ ರೋಗಿಯಲ್ಲ, ಮಗು ತುಂಬ ಆರೋಗ್ಯದೊಡನೆ ಹುಟ್ಟಿದೆ ಎಂದು ಮುಖ್ಯ ವೈದ್ಯರಾದ ಸಂದೀಪ್ ಪಟೇಲ್ ಹೇಳಿದ್ದಾರೆ.