ಬೆಂಗಳೂರು: ಸುಬ್ರಮಣ್ಯಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿರುವ ಖೋಟಾ ನೋಟು ಜಾಲದ ಆರೋಪಿ ಪುಲ್ಲಲರೇವು ರಾಜು ಎಂಬಾತ ಯೂಟ್ಯೂಬ್ ವಿಡಿಯೋ ನೋಡಿ ಆರ್’ಬಿಐ ನೋಟು ಸರಿಸಮನಾಗಿ ನಕಲಿ ನೋಟು ತಯಾರಿಸುತ್ತಿರುವುದು ಪತ್ತೆಯಾಗಿದೆ.
ಏಳನೇ ತರಗತಿ ಓದಿದ್ದ ಆರೋಪಿಯು ಅನಂತಪುರದಲ್ಲಿ ಬಾಡಿಗೆಗೆ ಮನೆ ಪಡೆದು ಯೂಟ್ಯೂಬ್ ವಿಡಿಯೋ ನೋಡಿ ನಕಲಿ ನೋಟು ತಯಾರು ಮಾಡುತ್ತಿದ್ದ. ಮನೆಯಲ್ಲಿ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದಾಗಿ ಹೇಳಿಕೊಂಡಿದ್ದ ಇತ, ಪಕ್ಕ ಬ್ಯುಸಿನೆಸ್ ಮಾದರಿಯಲ್ಲಿ ಪ್ರತ್ಯೇಕ ಮನೆ ಪಡೆದು ನೋಟ್ ಪ್ರಿಂಟ್ ಕೆಲಸ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ಅಧಿಕ ಹಣ ಮಾಡುವ ಉದ್ದೇಶದಿಂದ ಆನ್ ಲೈನ್ ಕ್ಲಾಸ್’ನಂತೆ ಯೂಟ್ಯೂಬ್ ವಿಡಿಯೋಗಳನ್ನು ಸತತವಾಗಿ ಆರು ತಿಂಗಳುಗಳ ಕಾಲ ನೋಡಿ, ನಂತರ ಈ ದಂಧೆಗೆ ಇಳಿದಿದ್ದಾನೆ. ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ನಕಲಿ ನೋಟ್ ಅನ್ನು ವರ್ಗಾವಣೆ ಮಾಡಿದ್ದಾನೆ. ಅತಿಯಾದ ಕ್ಯಾಶ್ ರೂಪದ ವ್ಯವಹಾರಗಳೇ ಇವರ ಗಾಳ, ಪ್ರಮುಖವಾಗಿ ಬಾರ್, ಥಿಯೇಟರ್, ಪೆಟ್ರೋಲ್ ಬಂಕ್, ಪಬ್’ಗಳನ್ನ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ.