Home ಟಾಪ್ ಸುದ್ದಿಗಳು ದುಬೈಯಿಂದ ಕೇರಳಕ್ಕೆ ಬರುವಾಗ ವಿಮಾನದಲ್ಲೇ ಮೃತಪಟ್ಟ ಮಹಿಳೆ

ದುಬೈಯಿಂದ ಕೇರಳಕ್ಕೆ ಬರುವಾಗ ವಿಮಾನದಲ್ಲೇ ಮೃತಪಟ್ಟ ಮಹಿಳೆ

ಎರ್ನಾಕುಲಂ: ದುಬೈಯಿಂದ ಕೊಚ್ಚಿಗೆ ವಿಮಾನದಲ್ಲಿ ಬರುತ್ತಿದ್ದ ಮಹಿಳೆಯೋರ್ವಳು ವಿಮಾನದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಕೋಟ್ಟಯಂನ ಮಣಿಮಲ ನಿವಾಸಿ ಎಲ್ಸಾ ಮಿನಿ ಆಂಟನಿ ಎಂದು ಗುರುತಿಸಲಾಗಿದೆ.

ವಿಮಾನದಲ್ಲಿ ಮಹಿಳೆ ಪ್ರಜ್ಞಾಹೀನಳಾಗಿದ್ದು, ಕೂಡಲೇ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಆದರೆ ವಿಮಾನ ಕೊಚ್ಚಿಯ ನೆಡುಂಬಾಶೇರಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ಗೆ ಮೊದಲೇ ಎಲ್ಸಾ ಮೃತಪಟ್ಟಿದ್ದಾಳೆ.

ಮಹಿಳೆಯ ಜೊತೆ ಅವರ ಗಂಡ ಕೂಡಾ ಇದ್ದರು ಎಂದು ತಿಳಿದುಬಂದಿದೆ.

Join Whatsapp
Exit mobile version