Home ಟಾಪ್ ಸುದ್ದಿಗಳು ಮಣಿಪುರ ‘ಬೆತ್ತಲೆ’ಗೆ ಮಿಡಿಯದ ಮೋದಿ ಹಾಸನ ‘ವಿಕೃತಿಗೆ’ ಮಿಡಿಯುವರೆ ? : ಕೆ.ಅಶ್ರಫ್

ಮಣಿಪುರ ‘ಬೆತ್ತಲೆ’ಗೆ ಮಿಡಿಯದ ಮೋದಿ ಹಾಸನ ‘ವಿಕೃತಿಗೆ’ ಮಿಡಿಯುವರೆ ? : ಕೆ.ಅಶ್ರಫ್

ಮಂಗಳೂರು: ಭಾರತದ ಮಹಿಳೆಯರ ‘ ಮಾಂಗಲ್ಯದ ‘ ಪಾವಿತ್ರ್ಯತೆ ಬಗ್ಗೆ ಅತೀವ ಕಾಳಜಿ ಹೊಂದಿರುವ ಹಾಗು ಭಾರತದ ಮಹಿಳೆಯರ ಮಾಂಗಲ್ಯ, ತಾಳಿಯನ್ನು ಕಾಂಗ್ರೆಸ್ ಪಕ್ಷ ಕಸಿದು ಮುಸ್ಲಿಮರಿಗೆ ಹಂಚಲಾಗುತ್ತದೆ ಎಂದು ಪ್ರಣಾಳಿಕೆಯ ಬಗ್ಗೆ ಬೊಬ್ಬಿರಿಸಿದ,ಮತ್ತು ಮಣಿಪುರದಲ್ಲಿ ರಾಜ್ಯ ಪ್ರೇರಿತ ಗಲಭೆ ಎಬ್ಬಿಸಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿ ಸಾಮೂಹಿಕ  ಅತ್ಯಾಚಾರ ಮಾಡಿದ ಘಟನೆಗಳಿಗೆ ಸಂಭಂದಿಸಿ ತುಟಿ ಬಿಚ್ಚದ ಪ್ರಧಾನಿ ಮೋದಿಯವರು ಹಾಸನದಲ್ಲಿನ ತನ್ನ ಎನ್ .ಡಿ.ಎ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರವರ ಇತ್ತೀಚಿನ ‘ ಉಚಿತ ಕಾಮ ಭಾಗ್ಯ ಯೋಜನೆ ಮತ್ತು ಹಾಸನದ ‘ ಕಾಮ ‘ ಗಾರಿ ಯೋಜನೆಯ ಸಂತ್ರಸ್ತರ ಬಗ್ಗೆ ಮೌನ ಮುರಿಯುವರೆ, ಅಂತ ಕಾದು ನೋಡಬೇಕಿದೆ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಹೇಳಿದ್ದಾರೆ.

ಭಾರತದ ನಾರಿಯರ ರಕ್ಷಣೆಯ ಮಹಾ ಜವಾಬ್ದಾರಿ ಹೊತ್ತು , ಭಾರತದ ಮಹಿಳೆಯರ ಮಾನ,ಮಾಂಗಲ್ಯ,ತಿಲಕಗಳ ಸಂರಕ್ಷಣೆಯ  ಗುತ್ತಿಗೆ ಪಡೆದ ಶೋಭಾ ಕರಂದ್ಲಾಜೆ,ಮಹಿಳಾ ಆಯೋಗ ಖುಷ್ಬೂ , ಸ್ಮೃತಿ ಇರಾನಿ, ಪ್ರಹ್ಲಾದ್ ಜೋಷಿ, ತೇಜಸ್ವಿ ಸೂರ್ಯ,ಸಿ.ಟಿ.ರವಿ, ಹರೀಶ್ ಪೂಂಜಾ,ಮುತಾಲಿಕ್, ಪಂಪ್ವೆಲ್ ಮುಂತಾದವರ ಹೋರಾಟ ಇನ್ನಷ್ಟೇ ಶುರುವಾಗ ಬೇಕಿದೆ?!. ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿಯ ಸಾವು,ಉಡುಪಿ ವಿಡಿಯೋ ಮುದ್ರಿಕೆ  ಪ್ರಕರಣದಲ್ಲಿ  ರಸ್ತೆಗೆ ಧುಮುಕಿದ ನಾರಿ ಸಂರಕ್ಷಕರು ಹಾಸನ ಸಂತ್ರಸ್ತ ನಾರಿಯರ ಪರ ಹೋರಾಟ ನಡೆಸಲು ಅವರಿಗೆ ಯಾವ ಸಾಮಗ್ರಿಗಳ ಕೊರತೆ ಇದೆ ಎಂದು ತಿಳಿಸಲಿ!. ಹೋರಾಟಗಾರರು  ಬಹುಶಃ, ಹಾಸನ ಸಂತ್ರಸ್ತರು ಯಾವ ಧರ್ಮದ ವ್ಯಕ್ತಿಯಿಂದ ಅನ್ಯಾಯಕ್ಕೆ ಒಳಗ್ಗಾಗಿದ್ದಾರೆ ಎಂದು ಮಾಹಿತಿ ಕಲೆ ಹಾಕುತ್ತಿರಲೂ ಬಹುದು!. ನರೇಂದ್ರ ಮೋದಿಯವರು ಕರ್ನಾಟಕದ ಸಂತ್ರಸ್ತರ ಬಗ್ಗೆ ಅಧಿಕ ಕಾಳಜಿ ವಹಿಸಬೇಕಿದೆ, ಅದರಲ್ಲೂ ಮಾಂಗಲ್ಯ ಅಪವಿತ್ರಗೊಳಿಸಿದ ತಮ್ಮ ಮೈತ್ರಿ ಪಕ್ಷದ ಅಭ್ಯರ್ಥಿಯ ಕೃತ್ಯದ ಸಂತ್ರಸ್ತರ ಬಗ್ಗೆ ಮೋದಿಯವರು ತಕ್ಷಣ ಸ್ಪಂದಿಸಬೇಕಿದೆ!. ಹಾಸನದ ಮುಗ್ಧರಿಗೆ ಕಾಮಗ್ರಹಣವಾದದ್ದು ತೀವ್ರ ಖಂಡನೀಯ ಎಂದು ಹೇಳಿದ್ದಾರೆ.

Join Whatsapp
Exit mobile version