ಹೇಗ್: ಯುದ್ಧಾಪರಾಧದ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಮೂವರು ಹಮಾಸ್ ನಾಯಕರ ವಿರುದ್ಧ ಇಂಟರ್‌ನ್ಯಾಷನಲ್ ಕ್ರಿಮಿನಲ್ ಕೋರ್ಟ್ ಅರೆಸ್ಟ್ ವಾರಂಟ್‌ಗ ಆದೇಶಿಸಿದೆ.
ಬೆಂಜಮಿನ್ ನೆತನ್ಯಾಹು, ಇಸ್ರೇಲ್ ರಕ್ಷಣಾ ಸಚಿವ ಯೊಯಾವ್ ಗ್ಯಾಲಂಟ್, ಹಮಾಸ್ ಸಂಘಟನೆಯ ಯೆಹಿಯಾ ಸಿನ್ವರ್, ಮೊಹಮ್ಮದ್ ಡೈಫ್ ಹಾಗೂ ಇಸ್ಮಾಯಿಲ್ ಹನಿಯೇಹ್ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಬೇಕು ಎಂಬುದು ಜಾಗತಿಕ ಕೋರ್ಟ್‌ನ ಆದೇಶವಾಗಿದೆ. ಕಳೆದ ಏಳು ತಿಂಗಳಲ್ಲಿ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್‌ನಲ್ಲಿ ನಡೆದ ಹಿಂಸಾಚಾರ, ಮಾನವ ಹಕ್ಕುಗಳ ದಮನ, ಪ್ರಾದೇಶಿಕ ಅಸ್ಥಿರತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಇವರ ವಿರುದ್ಧ ಅರೆಸ್ಟ್ ವಾರೆಟ್ ಹೊರಡಿಸಬೇಕು ಎಂಬುದಾಗಿ ಐಸಿಸಿ ಆದೇಶಿಸಿದೆ ಎಂದು ಕೋರ್ಟ್‌ನ ಮುಖ್ಯ ಪ್ರಾಸಿಕ್ಯೂಟರ್ ಆಗಿರುವ ಕರೀಮ್ ಖಾನ್ ಮಾಹಿತಿ ನೀಡಿದ್ದಾರೆ.