Home ಟಾಪ್ ಸುದ್ದಿಗಳು ಮದರಸ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಪ್ರಾಧಿಕಾರದಿಂದ ಸಹಕಾರ: ಟಿ. ಎಸ್. ನಾಗಾಭರಣ

ಮದರಸ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಪ್ರಾಧಿಕಾರದಿಂದ ಸಹಕಾರ: ಟಿ. ಎಸ್. ನಾಗಾಭರಣ

ಬೆಂಗಳೂರು: ರಾಜ್ಯದ ಮದರಸಾ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ. ಎಸ್ ನಾಗಾಭರಣ ಭರವಸೆ ನೀಡಿದ್ದಾರೆ.


ಮಸೀದಿ, ಮದರಸಗಳಲ್ಲಿ ಕನ್ನಡ ಕಲಿಕ ಕೇಂದ್ರ ಮತ್ತು ಕನ್ನಡ ಸಂಸ್ಕೃತಿ ಶಿಬಿರ ನಡೆಸುವ ಕುರಿತು ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ, ಅಲ್ ಫೈಝ್ ಟ್ರಸ್ಟ್, ಮತ್ತಿಕೆರೆ ಮಸ್ಜಿದೆ ತಾಹ, ಫಲಾಹೆ ದಾರೇನ್ ಎಜುಕೇಷನಲ್ ಸೋಶಿಯಲ್ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳೊಂದಿಗೆ ನಾಗಭರಣ ಸಭೆ ನಡೆಸಿದರು.


ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತಾನಾಡಿದ ನಾಗಾಭರಣ, ಅಖಿಲ ಕರ್ನಾಟಕ ಮಹಮದೀಯರ ವೇದಿಕೆ ಸಹಯೋಗದಲ್ಲಿ ಮಸೀದಿ ಮದರಸಗಳಲ್ಲಿ ಕನ್ನಡ ಕಲಿಕಾ ಕೇಂದ್ರ ಮತ್ತು ಕನ್ನಡ ಸಂಸ್ಕೃತಿ ಶಿಬಿರ ಪ್ರಯೋಜಿಸುವ ಬಗ್ಗೆ ಚರ್ಚಿಸಲಾಗಿದೆ ಎಂದರು.

Join Whatsapp
Exit mobile version