Home ಟಾಪ್ ಸುದ್ದಿಗಳು ವಿಪಕ್ಷಗಳ ಆಕ್ರೋಶಕ್ಕೆ ತುತ್ತಾಗುತ್ತಾರಾ ಬ್ರಿಟನ್ ಪ್ರಧಾನಿ ರಿಷಿ ಸುನಕ್?

ವಿಪಕ್ಷಗಳ ಆಕ್ರೋಶಕ್ಕೆ ತುತ್ತಾಗುತ್ತಾರಾ ಬ್ರಿಟನ್ ಪ್ರಧಾನಿ ರಿಷಿ ಸುನಕ್?

ಇಂಗ್ಲೆಂಡ್: ವಾರಗಳ ಕಾಲ ಬ್ರಿಟನ್’ನಲ್ಲಿ ಉಂಟಾದ ರಾಜಕೀಯ ಪ್ರಕ್ಷುಬ್ಧತೆಯ ಬಳಿಕ ನೂತನ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ಅವರು ತನ್ನ ಮೊದಲ ಸಂಸತ್ ಕಲಾಪದಲ್ಲಿ ವಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಬ್ರಿಟನ್’ನ ನೂತನ ನಾಯಕರಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡ ಅವರು, ಬಜೆಟ್ ಮೂಲಕ ದೇಶದ ಆರ್ಥಿಕತೆಗೆ ಹಾನಿ ಮಾಡಿದ ನಿರ್ಗಮಿತ ಪ್ರಧಾನಿ ಲಿಝ್ ಟ್ರಸ್ ಅವರ ನಡೆಯನ್ನು ಸರಿಪಡಿಸುವುದಾಗಿ ಸುನಕ್ ಪ್ರತಿಜ್ಞೆಗೈದರು.

ಛಿದ್ರಗೊಂಡ ಕನ್ಸರ್ವೇಟಿವ್‌ ಪಕ್ಷದ ನಿಲುವು ಮತ್ತು ಪ್ರಗತಿಯಾಗದ ದೇಶವನ್ನು ಒಗ್ಗೂಡಿಸುವುದಾಗಿ ಪ್ರತಿಜ್ಞೆ ಮಾಡಿದ ನೂತನ ಪ್ರಧಾನಿ ಸುನಕ್, ಹಿಂದಿನ ಸರ್ಕಾರದ ಉನ್ನತ ಸಚಿವ ಸಂಪುಟಕ್ಕೆ ಕತ್ತರಿ ಪ್ರಯೋಗಿಸುವ ಮೂಲಕ ತನ್ನ ಅಧಿಕಾರವಧಿಯಲ್ಲಿ ಮಹತ್ವದ ರಾಜಕೀಯ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿವೆ.

ನೂತನ ಪ್ರಧಾನಿ, ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಜೆರೆಮಿ ಹಂಟ್ ಅವರನ್ನು ವಿತ್ತ ಖಾತೆಯ ಮುಖ್ಯಸ್ಥರಾಗಿ ನೇಮಿಸಿದ್ದಾರೆ. ವಿದೇಶಾಂಗ, ರಕ್ಷಣಾ, ವ್ಯಾಪಾರ ಮತ್ತು ಸಂಸ್ಕೃತಿ ಸಚಿವಾಲಯ ಹುದ್ದೆಗಳನ್ನು ಸುನಕ್ ಅವರು ತಮ್ಮ ಬಳಿಯೇ ಇರಿಸಿದ್ದು, ವಿವಾದದಿಂದಾಗಿ ಇತ್ತೀಚೆಗೆ ವಜಾ ಮಾಡಿದ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್ ಮನ್ ಅವರನ್ನು ಸಚಿವ ಸಂಪುಟಕ್ಕೆ ಮರಳಿ ಸೇರಿಸಿದ್ದಾರೆ.

ಕಿಂಗ್ ಚಾರ್ಲ್ಸ್ III ಅವರ ನೇಮಕಾತಿಯ ನಂತರ 10 ನೇ ನಂಬರ್’ನ ಹೊರಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಸುನಕ್, ದೇಶವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಒಪ್ಪಿಕೊಂಡರು.

Join Whatsapp
Exit mobile version