Home ಟಾಪ್ ಸುದ್ದಿಗಳು ಕಡಬದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆಗಳು

ಕಡಬದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆಗಳು

ಮಂಗಳೂರು: ಕಡಬ ತಾಲೂಕಿನಲ್ಲಿ ಕಾಡಾನೆಗಳು ಮತ್ತೆ ಕಾಣಿಸಿಕೊಂಡಿವೆ.


ಐತೂರು ಭಾಗದ ಕೊಡೆಂಕೇರಿ, ಅಜನಾ ಎಂಬಲ್ಲಿ ಎರಡು ದೊಡ್ಡ ಆನೆಗಳೊಂದಿಗೆ ಒಂದು ಮರಿಯಾನೆ ಕಂಡುಬಂದಿದೆ.


ರಬ್ಬರ್ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆಗಳನ್ನು ನೋಡಿದ ಜನರು ಆತಂಕಕ್ಕೊಳಗಾಗಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

Join Whatsapp
Exit mobile version