Home ಟಾಪ್ ಸುದ್ದಿಗಳು ಅಪಘಾತ ಎಂದು ಬಿಂಬಿಸಿ ಪತಿಯನ್ನು ಕೊಂದ ಪತ್ನಿ !

ಅಪಘಾತ ಎಂದು ಬಿಂಬಿಸಿ ಪತಿಯನ್ನು ಕೊಂದ ಪತ್ನಿ !

ಬಾಗಲಕೋಟೆ: ಜುಲೈ 2ರಂದು ಹುನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿ ಅಪಘಾತವೊಂದರಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಸಾವಿನ ಅಸಲಿ ಕಾರಣ ಹೊರಬಿದಿದ್ದು, ಇದೊಂದು ಕೊಲೆ ಎಂದು ಪೊಲೀಸರು ತಿಳಿದ್ದಾರೆ.

ಅಪಘಾತದಲ್ಲಿ ಪ್ರವೀಣ ಸೇಬಣ್ಣವರ(30) ಎಂಬುವರು ಮೃತಪಟ್ಟಿದ್ದರು. ಆರಂಭದಲ್ಲಿ ಇದನ್ನು ಅಪಘಾತವೆಂದೇ ನಂಬಲಾಗಿತ್ತು. ಆದರೆ, ಇದೊಂದು ಅಪಘಾತವಲ್ಲ, ಪೂರ್ವ ನಿಯೋಜಿತ ಕೊಲೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಟಾಬಯಲಾಗಿದೆ.

ಆದರೆ ಆರೋಪಿ ಬೇರೆ ಯಾರೂ ಅಲ್ಲ, ಪ್ರೀತಿಸಿ ಮದುವೆಯಾಗಿದ್ದ ಪತ್ನಿ ನಿತ್ಯಾ.

ಪ್ರೀತಿಸಿ ಮದುವೆಯಾದರೂ ಬೇರೊಬ್ಬನ ಜೊತೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದ ನಿತ್ಯಾ, ಆತನೊಂದಿಗೆ ಸೇರಿಕೊಂಡು ಗಂಡನನ್ನೇ ಕೊಲೆ ಮಾಡಿದ್ದಾಳೆ.

ಜುಲೈ 2 ರಂದು ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು. ಕಾರಿನಲ್ಲಿ ಬಂದ ಪತ್ನಿ ಹಾಗೂ ಪ್ರಿಯಕರ ರಾಘವೇಂದ್ರ, ಪ್ರವೀಣ ಸೇಬಣ್ಣವರಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದರು. ಈ ವೇಳೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಸೇಬಣ್ಣವರ, ತನ್ನ ಪತ್ನಿಗೆ ಕರೆ ಮಾಡಿ ನನಗೆ ಅಪಘಾತವಾಗಿದೆ ಎಂದಿದ್ದ. ಇದನ್ನು ತಿಳಿದ ನಿತ್ಯಾ, ಮತ್ತೆ ಕಾರು ತಿರುಗಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ್ದಳು. ಕೊಲೆ ಖಚಿತವಾದ ಬಳಿಕ ಇಬ್ಬರು ಪರಾರಿಯಾಗಿದ್ದರು.

ಮೇಲ್ನೋಟಕ್ಕೆ ಅಪಘಾತದಲ್ಲಿ ಮೃತಪಟ್ಟ ರೀತಿ ಶವ ಪತ್ತೆಯಾಗಿತ್ತು. ಆದರೆ, ಬೈಕ್ ಬಿದ್ದ ಜಾಗ ಹಾಗೂ ಶವದ ಮೇಲಿನ ಗಾಯ ಕೊಲೆ ಶಂಕೆ ಮೂಡಿಸಿತ್ತು. ತನಿಖೆ ಕೈಗೊಂಡ ಪೊಲೀಸರು ನಿತ್ಯಾಳನ್ನು ವಿಚಾರಣೆ ನಡೆಸಿದಾಗ ನಿಜ ಬಣ್ಣ ಬಯಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Join Whatsapp
Exit mobile version