Home ಟಾಪ್ ಸುದ್ದಿಗಳು ರಾಜ್ಯದಲ್ಲಿ ಸ್ಮಶಾನಗಳ ಕೊರತೆ; ಹೆಣಗಳನ್ನು ರಸ್ತೆಯಲ್ಲಿ ಹಾಕಬೇಕಾ ಎಂದು ಪ್ರಶ್ನಿಸಿದ ಹೈಕೋರ್ಟ್

ರಾಜ್ಯದಲ್ಲಿ ಸ್ಮಶಾನಗಳ ಕೊರತೆ; ಹೆಣಗಳನ್ನು ರಸ್ತೆಯಲ್ಲಿ ಹಾಕಬೇಕಾ ಎಂದು ಪ್ರಶ್ನಿಸಿದ ಹೈಕೋರ್ಟ್

ಬೆಂಗಳೂರು: ರಾಜ್ಯದಲ್ಲಿ 974 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯಗಳೇ ಇಲ್ಲ ಎಂಬ ಎಂಬ ಅಂಕಿ ಅಂಶಗಳ ವರದಿ ಲಭ್ಯವಾಗಿದೆ.

ಸ್ಮಶಾನ ಇಲ್ಲದ ಗ್ರಾಮಗಳಿಗೆ ಆರು ತಿಂಗಳಲ್ಲಿ ಅಗತ್ಯ ಜಮೀನು ಒದಗಿಸಬೇಕು ಎಂಬ  2019 ರ  ಆದೇಶವನ್ನು ಸರಕಾರವು ಪಾಲಿಸದೇ ಇದ್ದ ಕಾರಣ, ಹೆಣಗಳನ್ನು ರಸ್ತೆಯಲ್ಲಿ ಹಾಕಬೇಕಾ ಎಂದು ರಾಜ್ಯ ಸರಕಾರವನ್ನು ಹೈಕೋರ್ಟ್ ಪ್ರಶ್ನಿಸಿತ್ತು.

ಬೆಳಗಾವಿ ಜಿಲ್ಲೆಯ  307 ಗ್ರಾಮಗಳು ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ 313 ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯಗಳಿಲ್ಲ. ರಾಜ್ಯದ  31 ಜಿಲ್ಲೆಗಳ ಪೈಕಿ ಬೆಳಗಾವಿ ಮತ್ತು ಶಿವಮೊಗ್ಗ ಜಿಲ್ಲೆಯ ಹೆಚ್ಚಿನ  ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯಗಳಿಲ್ಲ ಎಂದು  ತಿಳಿದು ಬಂದಿದೆ.

ಧಾರವಾಡದಲ್ಲಿ 76, ಗದಗ ದಲ್ಲಿ 67, ಚಾಮರಾಜನಗರ 24, ಚಿಕ್ಕಮಗಳೂರು 29, ಹಾಸನ 37, ಮಂಡ್ಯ 38, ಮೈಸೂರು 51, ಕೊಪ್ಪಳ 08, ಕೋಲಾರ 12, ರಾಮನಗರ 12, ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯ ಇಲ್ಲ.

ರಾಜ್ಯದ 31 ಜಿಲ್ಲೆಗಳ  21, 388 ಗ್ರಾಮಗಳ ಪೈಕಿ ಇನ್ನೂ ಶವ ಸಂಸ್ಕಾರಕ್ಕೆ  ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಜಮೀನು ಒದಗಿಸುವಂತೆ ಹೈಕೋರ್ಟ್ ನೀಡಿದ ಆದೇಶವನ್ನು  ಅಧಿಕಾರಿಗಳು ಹಾಗೂ ಸರಕಾರ ಗೌರವಿಸುತ್ತಿಲ್ಲ.

Join Whatsapp
Exit mobile version