Home ಟಾಪ್ ಸುದ್ದಿಗಳು 5 ಲಕ್ಷಕ್ಕೆ ಬ್ಲಾಕ್ ಮೇಲ್: ಪತಿ ವಿರುದ್ಧ ಪತ್ನಿ ದೂರು

5 ಲಕ್ಷಕ್ಕೆ ಬ್ಲಾಕ್ ಮೇಲ್: ಪತಿ ವಿರುದ್ಧ ಪತ್ನಿ ದೂರು

ಬೆಂಗಳೂರು: ಪತ್ನಿಯ ನಗ್ನ ವಿಡಿಯೋ ಇಟ್ಟುಕೊಂಡು ಪತಿಯೇ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿರುವ ಹೀನ ಕೃತ್ಯ ನಗರದಲ್ಲಿ ನಡೆದಿದ್ದು, ನೊಂದ ಮಹಿಳೆಯು ಪತಿಯ ವಿರುದ್ಧ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಾಗರ್ ಅರುಣ್ ಎಂಬಾತ ನಗ್ನ ವಿಡಿಯೋ ಬಳಸಿಕೊಂಡು ಪತ್ನಿಯಿಂದ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪಿಯಾಗಿದ್ದಾನೆ.

ಮದುವೆ ಬಳಿಕ ದಂಪತಿ ಮುಂಬೈನಲ್ಲಿ ವಾಸವಾಗಿದ್ದು, ಪತಿಗೆ ಅಶ್ಲೀಲ ವಿಡಿಯೋ ನೋಡುವ ಚಟವಿತ್ತು ಎನ್ನಲಾಗಿದೆ. ಅಲ್ಲದೆ ಪತಿಯು ಲೈಂಗಿಕವಾಗಿ ಹಿಂಸೆ ನೀಡಿದ್ದಲ್ಲದೆ, ಆತನೊಂದಿಗಿನ ಖಾಸಗಿ ಕ್ಷಣಗಳ ವಿಡಿಯೋಗಳನ್ನು ಸೆರೆಹಿಡಿದಿದ್ದಾನೆ ಎನ್ನಲಾಗಿದೆ. ಬಳಿಕ ಅವುಗಳನ್ನೇ ಇಟ್ಟುಕೊಂಡು 5 ಲಕ್ಷ ರೂ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಇದರಿಂದ ಬೇಸತ್ತು ಮುಂಬೈ ತೊರೆದು ಬೆಂಗಳೂರಿಗೆ ಬಂದರೂ ಪತಿಯ ಕಿರುಕುಳ ಮುಂದುವರೆದಿತ್ತು. ಇದಲ್ಲದೆ, ಪತಿ ಸಾಗರ್ ಗೆಳೆಯ ಸುಲೇಶ್ ಕಾರ್ನಕ್ ಕೂಡ ತನಗೆ ಕಿರುಕುಳ ನೀಡಿದ್ದಾನೆ. ಇವರಿಬ್ಬರೂ ಸೇರಿಕೊಂಡು ಪೋರ್ನ್ ಸೈಟ್ವೊಂದನ್ನು ನಡೆಸುತ್ತಿರುವುದು ನನಗೆ ತಡವಾಗಿ ಗೊತ್ತಾಗಿದೆ. ಸಾಗರ್ ಜೊತೆ ಆತನ ಗೆಳೆಯನೂ ಸಹ ಹಣದ ಬೇಡಿಕೆ ಇಟ್ಟಿದ್ದಾನೆ. ಪತಿಯು ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದು, ಕ್ರಮ ಕೈಗೊಳ್ಳಬೇಕೆಂದು ಮಹಿಳೆಯು ದೂರಿನಲ್ಲಿ ಆಗ್ರಹಿಸಿದ್ದಾರೆ.

ವಿಡಿಯೋ ಕಿರುಕುಳ ಮತ್ತು ವರದಕ್ಷಿಣೆ ಕಿರುಕುಳದ ಬಗ್ಗೆ ಬಸವೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Join Whatsapp
Exit mobile version