Home ಟಾಪ್ ಸುದ್ದಿಗಳು ಫಾಝಿಲ್ ಹತ್ಯೆಯ ಹಿಂದೆ ಪ್ರೇಮ ಪ್ರಕರಣ, ಪಂಗಡಗಳ ಕಲಹ ಎನ್ನುವುದು ಅಪ್ಪಟ ಸುಳ್ಳು : ಮಂಗಳೂರು...

ಫಾಝಿಲ್ ಹತ್ಯೆಯ ಹಿಂದೆ ಪ್ರೇಮ ಪ್ರಕರಣ, ಪಂಗಡಗಳ ಕಲಹ ಎನ್ನುವುದು ಅಪ್ಪಟ ಸುಳ್ಳು : ಮಂಗಳೂರು ಕಮಿಷನರ್

ಮಂಗಳೂರು: ಹೊರವಲಯದ ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆಗೆ ಸಂಬಂಧಿಸಿದಂತೆ ಆರು ಮಂದಿ ಆರ್ ಎಸ್ ಎಸ್ ಸಹ ಸಂಘಟನೆ ಬಜರಂಗದಳದ ಕಾರ್ಯರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳೂರು ಕಮಿಷನರ್ ಎನ್ .ಶಶಿಕುಮಾರ್ ಫಾಝಿಲ್ ಹತ್ಯೆ ಕುರಿತು ಹಲವು ಮಾಧ್ಯಮಗಳಲ್ಲಿ ಇದು ಪ್ರತೀಕಾರದ ಕೊಲೆಯಲ್ಲ. ಕೊಲೆಯು ಫಾಝಿಲ್ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ್ದು, ಇದು ಸಮುದಾಯದ ಪಂಗಡದ ನಡುವಿನ ಕಲಹದಿಂದ ನಡೆದ ಕೃತ್ಯ ಎಂದೆಲ್ಲಾ ಪ್ರಚಾರ ಮಾಡಲಾಗಿತ್ತು. ಇದು ಸತ್ಯವಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಫಾಝಿಲ್ ಹತ್ಯೆ ಬೆನ್ನಲ್ಲೇ ಕರ್ನಾಟಕ ಕೆಲವು ಪ್ರಮುಖ ಸುದ್ದಿವಾಹಿನಿಗಳು ಈ ಹತ್ಯೆಗೆ ಪ್ರೇಮ ಪ್ರಕರಣದ ಬಣ್ಣ ಕಟ್ಟಿ ಸುದ್ದಿ ಮಾಡಿದ್ದವು ಮತ್ತು ರಾಜ್ಯದ ಪ್ರತಿಷ್ಠಿತ ಪತ್ರಿಕೆಯೊಂದು ಫಾಝಿಲ್ ಹತ್ಯೆ ಸಮುದಾಯಗಳ ನಡುವಿನ ಪಂಗಡಗಳ ಕಲಹ ಎಂದು ವರದಿ ಮಾಡಿತ್ತು. ಆದರೆ ಇದೆಲ್ಲವೂ ಸುಳ್ಳು. ಸೋಷಿಯಲ್ ಮೀಡಿಯಾಗಳಲ್ಲಿ ಮನಸ್ಸಿಗೆ ಬಂದಿದ್ದನ್ನು ಬರೆಯುತ್ತಾರೆ. ಪ್ರಚೋದನಕಾರಿಯಾಗಿ ಬರೆದಿದ್ದಕ್ಕೆ 17 ಕೇಸ್ ದಾಖಲಿಸಿದ್ದೇವೆ ಎಂದು ಮಂಗಳೂರು ಕಮಿಷನರ್ ತಿಳಿಸಿದ್ದಾರೆ.

ಫಾಝಿಲ್ ಹತ್ಯೆಗೆ ಬಜರಂಗದಳ ಕಾರ್ಯಕರ್ತರು ಮತ್ತು ರೌಡಿ ಶೀಟರ್ ಗಳಾದ ಸುರತ್ಕಲ್ ಕೃಷ್ಣಾಪುರ ನಿವಾಸಿ ರೌಡಿ ಶೀಟರ್ ಶ್ರೀನಿವಾಸ್ ಯಾನೆ ಶೀನು , ಕಟೀಲು ಕಲ್ವಾರ್ ನಿವಾಸಿ ರೌಡಿಶೀಟರ್ ಸುಹಾಸ್ ಶೆಟ್ಟಿ , ಸುರತ್ಕಲ್ ಕೃಷ್ಣಾಪುರ ನಿವಾಸಿ ರೌಡಿಶೀಟರ್ ಅಭಿ ಯಾನೆ ಅಭಿಷೇಕ್ , ಸುರತ್ಕಲ್ ಕುಲಾಯಿ ನಿವಾಸಿ ಮೋಹನ್, ಗಿರಿ ಎಂಬವರೇ ಕಾರಣ ಎಂದು ತಿಳಿಸಿದ್ದಾರೆ.

Join Whatsapp
Exit mobile version