Home ಟಾಪ್ ಸುದ್ದಿಗಳು ಪತಿ ಸಾವಿನಿಂದ ನೊಂದ ಪತ್ನಿ, ಮಗಳನ್ನು ಕೊಂದು ಆತ್ಮಹತ್ಯೆ

ಪತಿ ಸಾವಿನಿಂದ ನೊಂದ ಪತ್ನಿ, ಮಗಳನ್ನು ಕೊಂದು ಆತ್ಮಹತ್ಯೆ

ಬೆಳಗಾವಿ: ಎರಡು ದಿನಗಳ  ಹಿಂದೆ ಪತಿಯ ಸಾವಿನಿಂದ ನೊಂದ ಪತ್ನಿ ತನ್ನ ಒಂದೂವರೆ ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ಕುಡಿತದ ಚಟದ ಹಿನ್ನೆಲೆಯಲ್ಲಿ ವಂಟಮೂರಿ ಗ್ರಾಮದ ಹೊಳೆಪ್ಪ ಮಸ್ತಿ (25) ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನಿಂದ ನೊಂದ ಅವರ ಪತ್ನಿ ವಾಸಂತಿ (20) ಅವರು ತನ್ನ ಒಂದೂವರೆ ವರ್ಷದ ಪುತ್ರಿ ಮಾನಸಾಳನ್ನು ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಳೆಪ್ಪ ಮಸ್ತಿಗೆ ಕುಡಿತದ ಚಟವಿದ್ದು ಅದರಂತೆ ಮದ್ಯ ಸೇವನೆ ಮಾಡಿದ ಅಮಲಿನಲ್ಲೇ ಇದ್ದ ಹೊಳೆಪ್ಪ ಕಳೆದ ಅ.20ರಂದು ಮಧ್ಯಾಹ್ನ ಮಲ್ಲಹೋಳ ಗ್ರಾಮದ ತನ್ನ ಮನೆಯಲ್ಲೇ ಕ್ರಿಮಿನಾಶಕ ಸೇವಿಸಿದ್ದನು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದನು.

ಪತಿಯ ಮರಣದ ಮಾರನೇ ದಿನ ವಾಸಂತಿ ವಂಟಮೂರಿನಲ್ಲಿರುವ ತವರು ಮನೆಗೆ ಬಂದಿದ್ದಳು. ಇಲ್ಲಿ ಹೊರವಲಯದ ಗದ್ದೆಗೆ ಮಗಳು ಮಾನಸಾಳನ್ನು ಕರೆದೊಯ್ದಿದ್ದ ವಾಸಂತಿ ಮೊದಲು ಆಕೆಯ ಕತ್ತು ಹಿಸುಕಿ ಕೊಂದು ಹಾಕಿದ್ದಾಳೆ. ಬಳಿಕ ಪಕ್ಕದಲ್ಲೇ ಇದ್ದ ಮರಕ್ಕೆ ಶಾಲ್ ನಿಂದ ನೇಣು ಬಿಗಿದುಕೊಂಡು ವಾಸಂತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಕಾಕತಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆಯನ್ನು ನಡೆಸುತ್ತಿದ್ದಾರೆ.

Join Whatsapp
Exit mobile version