Home ಟಾಪ್ ಸುದ್ದಿಗಳು ಕಳವಿಗೆ ನುಗ್ಗಿದ ಮನೆಯಲ್ಲಿಯೇ ನೇಣಿಗೆ ಶರಣಾದ ಕಳ್ಳ!

ಕಳವಿಗೆ ನುಗ್ಗಿದ ಮನೆಯಲ್ಲಿಯೇ ನೇಣಿಗೆ ಶರಣಾದ ಕಳ್ಳ!

ಬೆಂಗಳೂರು: ಕಳ್ಳತನಕ್ಕಾಗಿ ಮನೆಯೊಂದಕ್ಕೆ ನುಗ್ಗಿದ ಕಳ್ಳನೋರ್ವ ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಂದಿರಾನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಕಳ್ಳನನ್ನು ದಿಲೀಪ್ ಬಹದ್ದೂರ್ ಎಂದು ಗುರುತಿಸಲಾಗಿದೆ.

ಮನೆಗೆ ಬೀಗ ಹಾಕಿಕೊಂಡು ಯೂರೋಪ್ ಪ್ರವಾಸ ಹೋಗಿದ್ದ ಸಾಫ್ಟ್ ವೇರ್ ಕಂಪನಿಯೊಂದರ ಉದ್ಯೋಗಿಯ ಮನೆಗೆ ದಿಲೀಪ್ ನುಗಿದ್ದ. ಅಲ್ಲೇ ಮುಂಜಾನೆಯಿಂದ ಸಂಜೆವರೆಗೂ ವಾಸ್ತವ್ಯ ಹೂಡಿ ಬಾತ್ ರೂಮ್ ನಲ್ಲಿ ಸ್ನಾನ ಮಾಡಿದಲ್ಲದೆ ಇಡೀ ಮನೆಯನ್ನು ಜಾಲಾಡಿದ್ದಾನೆ. ಸಂಜೆ ಆಗುತ್ತಿದ್ದಂತೆ ಯುರೋಪ್ ಪ್ರವಾಸ ಮುಗಿಸಿ ಸಾಫ್ಟ್ ವೇರ್ ಕಂಪನಿ ಉದ್ಯೋಗಿ  ಮನೆಗೆ ಮರಳಿದ್ದಾರೆ.

ಮನೆಯವರು ಒಳಬರುತ್ತಿದ್ದಂತೆ ಆತಂಕಗೊಂಡು ದೇವರ ಕೋಣೆ ಮುಂದೆ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡು ದಿಲೀಪ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ದಿಲೀಪ್ ಬಹದ್ದೂರ್ 2006ರಲ್ಲಿ ಜೀವನ್ ಭೀಮಾನಗರದಲ್ಲಿ ಕಳ್ಳತನ ಕೃತ್ಯದಲ್ಲಿ ಬಂಧಿಯಾಗಿದ್ದ. ಈ ಸಂಬಂಧ ಇಂದಿರಾನಗರ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp
Exit mobile version