15 ತಿಂಗಳು ಕಾಂಗ್ರೆಸ್ ಬಿಜೆಪಿ ಭ್ರಷ್ಟಾಚಾರ ಬಗ್ಗೆ ಮೃದು ಧೋರಣೆ ಅನುಸರಿಸಿದ್ದು ಯಾಕೆ: ಎಸ್ಡಿಪಿಐ ಪ್ರಶ್ನೆ

Prasthutha|

ಬೆಂಗಳೂರು: 136 ಸೀಟುಗಳೊಂದಿಗೆ ಕಾಂಗ್ರೆಸ್ ಭರ್ಜರಿಯಾಗಿ ಅಧಿಕಾರಕ್ಕೆ ಏರಿ 15 ತಿಂಗಳಾಯಿತು. 15 ತಿಂಗಳು ಕಳೆದರೂ ಬಿಜೆಪಿಯ ನಾಯಕರ ಭ್ರಷ್ಟಾಚಾರದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರಲು ಕಾರಣವೇನು ಎಂದು ಕಾಂಗ್ರೆಸ್ ಸರಕಾರವನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಪ್ರಶ್ನಿಸಿದೆ.

- Advertisement -

ಕಳೆದ ಬಾರಿ ವಿರೋಧ ಪಕ್ಷದಲ್ಲಿದ್ದಾಗ ಕೋವಿಡ್ ಹಗರಣ, 40% ಕಮಿಷನ್ ಹಗರಣ ಇತ್ಯಾದಿ ಹಲವು ಬಿಜೆಪಿಯ ಭ್ರಷ್ಟಾಚಾರ, ಹಗರಣಗಳ ಬಗ್ಗೆ ಕಾಂಗ್ರೆಸ್ ಹಲವು ಹೋರಾಟ ನಡೆಸಿತ್ತು. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಬಗ್ಗೆ ಬಿಜೆಪಿ ಪಕ್ಷದ ಮುಖಂಡರೇ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಅಧಿಕಾರಕ್ಕೆ ಬಂದು 15 ತಿಂಗಳು ಕಳೆದರೂ ಬಿಜೆಪಿಯ ನಾಯಕರ ಭ್ರಷ್ಟಾಚಾರದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಾಂಗ್ರೆಸ್ ಸರ್ಕಾರ, ಈಗ ಸಿದ್ದರಾಮಯ್ಯರವರ ಮೇಲೆ ಭ್ರಷ್ಟಾಚಾರದ ಆರೋಪ ಬಂದ ಮೇಲೆ ವಿಪಕ್ಷ ನಾಯಕರ ಭ್ರಷ್ಟಾಚಾರದ ಬಗ್ಗೆ ಕ್ರಮ ಕೈಗೊಳ್ಳುವ ಮಾತನಾಡುತ್ತಿದೆ. ಹಾಗಿದ್ದರೆ ಈ 15 ತಿಂಗಳು ನೀವೇಕೆ ಸುಮ್ಮನಿದ್ದೀರಿ? ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಮೃದು ಧೋರಣೆ ಅನುಸರಿಸಿದ್ದು ಯಾಕೆ ದಯವಿಟ್ಟು ಕರ್ನಾಟಕದ ಜನತೆಗೆ ಉತ್ತರಿಸಿ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷರ ಅಬ್ದುಲ್ ಮಜೀದ್ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನಿಸಿದ್ದಾರೆ.



Join Whatsapp
Exit mobile version