Home ಟಾಪ್ ಸುದ್ದಿಗಳು ನಾವು ನಿಮ್ಮೊಂದಿಗೆ ಇದ್ದೇವೆ, ಎದೆಗುಂದಬೇಡಿ: ಶಾಸಕಾಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಶಾಸಕರ ಬೆಂಬಲ

ನಾವು ನಿಮ್ಮೊಂದಿಗೆ ಇದ್ದೇವೆ, ಎದೆಗುಂದಬೇಡಿ: ಶಾಸಕಾಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಶಾಸಕರ ಬೆಂಬಲ

ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ಶಾಸಕರು, ಸಚಿವರು ಸಿಎಂಗೆ ನೈತಿಕ ಸ್ಥೈರ್ಯ ತುಂಬಿ ಒಕ್ಕೊರಲ ಬೆಂಬಲ ಸೂಚಿಸಿದ್ದಾರೆ.

ನೀವು ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ಕಾನೂನು ಹೋರಾಟ ನಡೆಸಿ ಅಂತ ಶಾಸಕರು ಸಲಹೆ ಕೊಟ್ಟಿದ್ದಾರೆ.

ನಾಳೆ (ಆ.23) ಹೈಕಮಾಂಡ್ ಭೇಟಿಗಾಗಿ ಸಿಎಂ ಸಿದ್ದರಾಮಯ್ಯ ತೆರಳಲಿದ್ದು, ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಅಲ್ಲದೇ ಸಿಎಂ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನೂ ಕೈಗೊಳ್ಳಲಾಯಿತು. ರಾಷ್ಟ್ರಪತಿಗಳ ಮುಂದೆ ಶಾಸಕರ ಪೆರೇಡ್‌ಗೆ ನಿರ್ಧರಿಸಲಾಯಿತು. ಆ.23ರಂದು ಹೈ ಕಮಾಂಡ್ ಬಳಿ ಈ ವಿಚಾರ ಮಾತನಾಡಲು ನಿರ್ಧಾರ ಕೈಗೊಳ್ಳಲಾಯಿತು. ಹೈಕಮಾಂಡ್ ಅನುಮತಿ ಕೊಟ್ಟರೇ, ಅಲ್ಲೇ ದಿನಾಂಕ ನಿಗದಿಪಡಿಸಲಿರುವ ಸಿಎಂ ಹಾಗೂ ಡಿಸಿಎಂ ಎಲ್ಲಾ 135 ಶಾಸಕರನ್ನ ದೆಹಲಿಗೆ ಕರೆದೊಯ್ದು, ರಾಷ್ಟ್ರಪತಿಗಳ ಮುಂದೆ ಪೆರೆಡ್ ಮಾಡಿಸಿ, ರಾಜ್ಯಪಾಲರ ವಿರುದ್ಧ ದೂರು ಕೊಡಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಯಿತು.

ರಾಜ್ಯಪಾಲರ ಒಪ್ಪಿಗೆಗೆ ಕಾದಿರುವ ಪ್ರಕರಣಗಳಾದ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಗಣಿ ಗುತ್ತಿಗೆ ಲೈಸೆನ್ಸ್ ಪ್ರಕರಣ, ಜನಾರ್ದನ ರೆಡ್ಡಿ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣ, ಮುರುಗೇಶ ನಿರಾಣಿ ವಿರುದ್ಧ `ಇನ್ವೆಸ್ಟ್ ವೀಡಿಯೋ’ ಪ್ರಕರಣ, ಮಾಜಿ ಮಂತ್ರಿ ಶಶಿಕಲಾ ಜಿಲ್ಲೆ ವಿರುದ್ಧ ಮೊಟ್ಟೆ ಪ್ರಕರಣವಾಗಿದೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಪ್ರದೀಪ್ ಈಶ್ವರ್, ವಿನಯ್ ಕುಲಕರ್ಣಿ, ರಾಜು ಕಾಗೆ, ಮಂಜುನಾಥ್ ಭಂಡಾರಿ, ಸುಧಾಮ್ ದಾಸ್, ಹ್ಯಾರಿಸ್, ಬೋಸರಾಜು, ನಾರಾಯಣಸ್ವಾಮಿ, ಕೆ.ಜೆ ಜಾರ್ಜ್, ಶರಣು ಪ್ರಕಾಶ್ ಪಾಟೀಲ್, ನರೇಂದ್ರ ಸ್ವಾಮಿ, ಶ್ರೀನಿವಾಸ ಮಾನೆ, ಉಮಾಶ್ರೀ, ರಾಜೇಗೌಡ, ರಾಮೋಜಿಗೌಡ, ಜಮೀರ್ ಅಹಮದ್ ಪಾಲ್ಗೊಂಡಿದ್ದರು.

Join Whatsapp
Exit mobile version