Home ಟಾಪ್ ಸುದ್ದಿಗಳು BJP ರಾಜ್ಯಗಳ ತಪ್ಪು ನಿಮಗೇಕೆ ಕಾಣಲ್ಲ? :ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ

BJP ರಾಜ್ಯಗಳ ತಪ್ಪು ನಿಮಗೇಕೆ ಕಾಣಲ್ಲ? :ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ

ಹೊಸದಿಲ್ಲಿ: ಬಿಜೆಪಿಯೇತರ ರಾಜ್ಯಸರ್ಕಾರಗಳ ತಪ್ಪುಗಳ ವಿರುದ್ಧ ಕ್ರಮ ಕೈಗೊಳ್ಳುವ ಕೇಂದ್ರಸರ್ಕಾರ, ಬಿಜೆಪಿ ಆಡಳಿವಿರುವ ರಾಜ್ಯಗಳಲ್ಲಿನ ತಪ್ಪುಗಳನ್ನು ಕಂಡೂ ಮೌನ ವಹಿಸುವುದು ಏಕೆ? ರಾಜ್ಯಗಳ ವಿಚಾರದಲ್ಲಿ ಇಂಥ ನಿಲುವು ಸಲ್ಲದು ಎಂದು ಸುಪ್ರೀಂ ಕೋರ್ಟ್‌ ಬುಧವಾರ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ.

ನಾಗಾಲ್ಯಾಂಡ್‌ನ‌ಲ್ಲಿ ಮಹಿಳೆಯರಿಗೆ ಶೇ.33ರ ಮೀಸಲು ಅನ್ವಯಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕೆಂದು ನಾಗಾಲ್ಯಾಂಡ್‌ ಸರ್ಕಾರ ಹಾಗೂ ಚುನಾವಣೆ ಆಯೋಗಕ್ಕೆ ನಿರ್ದೇಶಿಸಲಾಗಿದೆ. ಆದಾಗ್ಯೂ ನ್ಯಾಯಾಲಯದ ಆದೇಶ ಪಾಲನೆಯಾಗದಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು.

ನ್ಯಾಯಮೂರ್ತಿ ಎಸ್‌.ಕೆ.ಕೌಲ್‌ ಅವರ ನ್ಯಾಯಪೀಠ ಈ ಅರ್ಜಿಯನ್ನು ವಿಚಾರಣೆ ನಡೆಸಿದೆ. ಈ ವೇಳೆ ಆದೇಶ ಪಾಲನೆಯಾಗದ್ದನ್ನು ಗಮನಿಸಿ, ಬಿಜೆಪಿಯೇತರ ರಾಜ್ಯಗಳ ಎಡವಟ್ಟಿಗೆ ತೀಕ್ಷ್ಣ ಕ್ರಮ ಕೈಗೊಳ್ಳುವ ನೀವು, ನಿಮ್ಮದೇ ಪಕ್ಷ ಆಡಳಿತದಲ್ಲಿರುವ ರಾಜ್ಯಗಳ ವಿಚಾರದಲ್ಲಿ ಏಕೆ ಸುಮ್ಮನಿರುತ್ತೀರಿ ಎಂದು ಕೇಂದ್ರವನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಸಾಂವಿಧಾನಿಕ ನಿಬಂಧನೆಯ ಉಲ್ಲಂಘನೆ ಸಲ್ಲದು ಎಂದು ಎಚ್ಚರಿಸಿದ್ದಾರೆ.

Join Whatsapp
Exit mobile version