Home ಟಾಪ್ ಸುದ್ದಿಗಳು ಮಸೀದಿ ಕಾನೂನು ಬಾಹಿರವೋ ಅಲ್ಲವೋ ಎಂದು ನಿರ್ಧರಿಸಲು ಮುತಾಲಿಕ್ ಗೆ ಅಧಿಕಾರ ಕೊಟ್ಟವರು ಯಾರು?: ಅಫ್ಸರ್...

ಮಸೀದಿ ಕಾನೂನು ಬಾಹಿರವೋ ಅಲ್ಲವೋ ಎಂದು ನಿರ್ಧರಿಸಲು ಮುತಾಲಿಕ್ ಗೆ ಅಧಿಕಾರ ಕೊಟ್ಟವರು ಯಾರು?: ಅಫ್ಸರ್ ಕೊಡ್ಲಿಪೇಟೆ

ಬೆಳಗಾವಿ: ಮಸೀದಿ ಕಾನೂನು ಬಾಹಿರವೋ ಅಲ್ಲವೋ ಎಂದು ನಿರ್ಧರಿಸಲು ಮುತಾಲಿಕ್ ಗೆ ಅಧಿಕಾರ ಕೊಟ್ಟವರು ಯಾರು? ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಬೆಳಗಾವಿ ಪೋಲಿಸ್ ನಿರೀಕ್ಷಕರೇ,, ಫಾತಿಮಾ ಮಸೀದಿ ವಿಚಾರವನ್ನು ಮುಂದಿಟ್ಟುಕೊಂಡು ಕೋಮು ವೈಷಮ್ಯವನ್ನು ಹರಡುತ್ತಿರುವ ಸಂಘಪರಿವಾರದ ನಾಯಕರನ್ನು ತಹಬದಿಗೆ ತನ್ನಿ. ಕಾನೂನು ಬಾಹಿರ ಮಸೀದಿಯೋ ಅಲ್ಲವೋ ಎಂದು ನಿರ್ಧರಿಸಲು ಮುತಾಲಿಕ್ ಗೆ ಅಧಿಕಾರ ಕೊಟ್ಟವರು ಯಾರು? ಎಂದು ಕಿಡಿಕಾರಿದ್ದಾರೆ.

ಬೆಳಗಾವಿಯ ಸಾರಥಿ ನಗರದಲ್ಲಿದ್ದ ಮನೆಯನ್ನೇ ಫಾತಿಮಾ ಮಸೀದಿಯಾಗಿ ಪರಿವರ್ತಿಸಿ ವಕ್ಫ್​ ಬೋರ್ಡ್​ಗೆ ಹಸ್ತಾಂತರ ಮಾಡಲಾಗಿದೆ ಎಂದು ಆರೋಪಿಸಿ ಮಸೀದಿ ತೆರವಿಗೆ ಬಿಜೆಪಿ ನಾಯಕರು, ಹಿಂದು ಸಂಘಟನೆಗಳ ನಾಯಕರು ಆಗ್ರಹಿಸಿದ್ದರು. ಮಸೀದಿ ಕಾನೂನು ಬಾಹಿರ ಎಂದು ಆರೋಪಿಸಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಮಸೀದಿಯನ್ನು ಒಂದು ವಾರದ ಒಳಗೆ ತೆರವು ಮಾಡಲು ಗಡುವು ನೀಡಿದ್ದರು.

Join Whatsapp
Exit mobile version