ವಿಶ್ವಸಂಸ್ಥೆ: ರಾಷ್ಟ್ರದಲ್ಲಿನ ಪ್ರಸ್ತುತ ಕೋವಿಡ್ ಸನ್ನಿವೇಶದ ಕುರಿತು ಮಾಹಿತಿ ನೀಡುವಂತೆ ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಒತ್ತಾಯಿಸಿದೆ.
‘ಝೀರೋ ಕೋವಿಡ್’ ಕಠಿಣ ನಿಯಮವನ್ನು ಚೀನಾ ಸಡಿಲಿಸಿದ ಬೆನ್ನಲ್ಲೇ ಕೊರೊನಾ ಸೋಂಕು ಪ್ರಕರಣಗಳು ಉಲ್ಬಣಗೊಂಡಿದೆ. ಈ ಹಿನ್ನೆಲೆ ಜಾಗತಿಕ ಆರೋಗ್ಯ ಏಜೆನ್ಸಿಯು ಚೀನಾದ ಆರೋಗ್ಯ ಅಧಿಕಾರಿಗಳಿಗೆ ಸೋಂಕಿನ ಆನುವಂಶಿಕ ಅನುಕ್ರಮ, ಆಸ್ಪತ್ರೆಗೆ ದಾಖಲಾಗಿರುವವರ ಸಂಖ್ಯೆ, ಸಾವುಗಳು ಮತ್ತು ಲಸಿಕಾಕರಣ, ಸೋಂಕು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಮಾಹಿತಿ ಹಂಚಿಕೊಳ್ಳುವಂತೆ ಆಗ್ರಹಿಸಿದೆ.
ಕೋವಿಡ್-19 ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ WHO ಮತ್ತು ಚೀನಾ ನಡುವೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ಲಸಿಕೀಕರಣದ ಮಹತ್ವ, ಬೂಸ್ಟರ್ ಡೋಸ್ನ ಅಗತ್ಯತೆ ಕುರಿತು WHO ಸಲಹೆ ನೀಡಿದೆ.