Home ಟಾಪ್ ಸುದ್ದಿಗಳು ಸೈಫ್ ಅಲಿ ಖಾನ್ ಮೇಲೆ ಅಟ್ಯಾಕ್ ಆದಾಗ ಕರೀನಾ ಕಪೂರ್ ಎಲ್ಲಿದ್ದರು?

ಸೈಫ್ ಅಲಿ ಖಾನ್ ಮೇಲೆ ಅಟ್ಯಾಕ್ ಆದಾಗ ಕರೀನಾ ಕಪೂರ್ ಎಲ್ಲಿದ್ದರು?

ಬಾಲಿವುಡ್ ನಟ ಸೈಫ್ ಅಲಿ ಖಾನ್‌ ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವ ಹಿನ್ನೆಲೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ನಟನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಾಗಾದ್ರೆ ಪತ್ನಿ ಕರೀನಾ ಕಪೂರ್ ಮತ್ತು ಮಕ್ಕಳು ಸೇವ್ ಆಗಿದ್ದು ಹೇಗೆ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

ಸೈಫ್ ಅಲಿ ಖಾನ್ ಅವರು ಮಾತ್ರ ಮನೆಯಲ್ಲಿ ಇದ್ದರು. ಕರೀನಾ ಕಪೂರ್ ಅವರು ಬುಧವಾರ (ಜನವರಿ 15) ರಾತ್ರಿ ಕರೀಷ್ಮಾ ಕಪೂರ್, ಸೋನಂ ಕಪೂರ್, ರಿಯಾ ಕಪೂರ್ ಜೊತೆ ಪಾರ್ಟಿಗೆ ತೆರಳಿದ್ದರು. ಕರೀನಾ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪಾರ್ಟಿ ಮಾಡುತ್ತಿರುವ ಫೋಟೋ ಕೂಡ ಹಂಚಿಕೊಂಡಿದ್ದರು. ಇದಕ್ಕೆ ‘ಗರ್ಲ್ಸ್​ ನೈಟ್​ ಇನ್’ ಎಂದು ಕ್ಯಾಪ್ಶನ್ ನೀಡಿದ್ದರು. ಹೀಗಾಗಿ ಹಲ್ಲೆ ನಡೆಯುವ ಸಂದರ್ಭದಲ್ಲಿ ಅವರು ಮನೆಯಲ್ಲಿ ಇರಲಿಲ್ಲ. ಇದರಿಂದ ಅವರು ಬಚಾವ್ ಆಗಿದ್ದಾರೆ. ಇಲ್ಲದಿದ್ದರೆ ಅವರೂ ಗಾಯಗೊಳ್ಳುತ್ತಿದ್ದರೇನೋ.

ಗುರುವಾರ (ಜನವರಿ 16) ಮುಂಜಾನೆ 3ರಿಂದ 4 ಗಂಟೆ ಸುಮಾರಿಗೆ ಈ ಕಳ್ಳತನದ ಪ್ರಯತ್ನ ನಡೆದಿದೆ. ಸದ್ಯ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸೈಫ್ ಅಲಿ ಖಾನ್ ಮನೆ ಹಾಗೂ ಸುತ್ತ ಮುತ್ತ ಇರುವ ಪ್ರದೇಶಗಳ ಸಿಸಿಟಿವಿ ದೃಶ್ಯವ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಸೈಫ್ ಅಲಿ ಖಾನ್ ಅವರಿಗೆ ಬರೋಬ್ಬರಿ 4 ಕಡೆಗಳಲ್ಲಿ ಗಾಯಗಳಾಗಿವೆ. ಅವರ ಪರಿಸ್ಥಿತಿ ಗಂಭಿರವಾಗಿದೆ ಎನ್ನಲಾಗಿದೆ. ಬೆನ್ನು ಮೂಳೆ ಸಮೀಪ ಆಳವಾದ ಗಾಯವಾಗಿದ್ದು, ಅವರಿಗೆ ಸರ್ಜರಿ ಮಾಡಲಾಗುತ್ತಿದೆ. ಅವರು ಬೇಗ ಚೇತಿಸಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

Join Whatsapp
Exit mobile version