Home ಟಾಪ್ ಸುದ್ದಿಗಳು ಮುಂಬೈನಲ್ಲಿ ಸೈಫ್‌ ಕೂಡ ಸೇಫ್‌ ಇಲ್ಲ: ಫಡ್ನವೀಸ್‌ ಸರ್ಕಾರದ ವಿರುದ್ಧ ಉದ್ಧವ್‌ ಬಣ ತೀವ್ರ ವಾಗ್ದಾಳಿ

ಮುಂಬೈನಲ್ಲಿ ಸೈಫ್‌ ಕೂಡ ಸೇಫ್‌ ಇಲ್ಲ: ಫಡ್ನವೀಸ್‌ ಸರ್ಕಾರದ ವಿರುದ್ಧ ಉದ್ಧವ್‌ ಬಣ ತೀವ್ರ ವಾಗ್ದಾಳಿ

ಮುಂಬೈ: ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಮೇಲೆ ನಡೆದಿರುವ ಹಲ್ಲೆ ಇದೀಗ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದು, ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಬಣವು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.


ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಸೆಲೆಬ್ರಿಟಿಗಳಿಗೆ ರಕ್ಷಣೆ ಇಲ್ಲ ಎಂದ ಮೇಲೆ, ಇನ್ನು ಜನಸಾಮಾನ್ಯರ ಪಾಡೇನು ಎಂದು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಬಣ ಪ್ರಶ್ನಿಸಿದೆ.


ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’‌ ಅಕೌಂಟ್‌ನಲ್ಲಿ ಟ್ವೀಟ್‌ ಮಾಡಿರುವ ಶಿವಸೇನೆ(ಯುಬಿಟಿ)ನಾಯಕಿ ಮತ್ತು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ, “ರಾಜಧಾನಿ ಮುಂಬೈನಲ್ಲಿ ಸೆಲೆಬ್ರಿಟಿಗಳೇ ಸುರಕ್ಷತೆಯ ಕೊರತೆ ಎದುರಿಸುತ್ತಿದ್ದಾರೆ ಎಂದರೆ ಜನಸಾಮಾನ್ಯರು ಪರಿಸ್ಥಿತಿ ಹೇಗಿರಬೇಡ..?” ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version