ಬೆಂಗಳೂರು: ಕರ್ನಾಟಕದ ಬಿಜೆಪಿ ನಾಯಕರು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ First rank ಪಡೆಯಲು ಪೈಪೋಟಿಗೆ ಬಿದ್ದಿರುವಂತಿದೆ, ಬಿಜೆಪಿ ನಾಯಕರ ಅ‘ಜ್ಞಾನ’ ಸಂಪಾದನೆಯ ಮೂಲ ವಾಟ್ಸಾಪ್ ಯೂನಿವರ್ಸಿಟಿ ಮಾತ್ರ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಮೋದಿಯವರು 26 ವರ್ಷದವರಿದ್ದಾಗ ಕೇದಾರನಾಥದಲ್ಲಿ ಪ್ರದಕ್ಷಿಣೆ ಹಾಕಿದ್ದು ಎಂದು ವಿಡಿಯೋ ಹಾಕಿದ ಬಿಸಿ ಪಾಟೀಲ್ ಅವರು ಕನಿಷ್ಠ ಆಲೋಚನಾ ಶಕ್ತಿಯನ್ನೂ ಹೊಂದಿಲ್ಲ, ಮೋದಿಯವರಿಗೆ 26 ವರ್ಷವಿದ್ದಾಗಲೂ ಕ್ಯಾಮರಾ ಪ್ರೇಮಿಯಾಗಿದ್ದರೆ? ಎಂದು ಪ್ರಶ್ನಿಸಿದೆ.
1976ರಲ್ಲಿ ಕಲರ್ ಕ್ಯಾಮರಾ ಅಸ್ತಿತ್ವದಲ್ಲಿತ್ತಾ? ಇರಬಹುದೇನೋ ಏಕೆಂದರೆ 1988ರಲ್ಲೇ ಡಿಜಿಟಲ್ ಕ್ಯಾಮೆರಾ ಬಳಸಿದವರಲ್ಲವೇ ಮೋದಿ! ಬಿಜೆಪಿ ಮೋದಿಯ ಬಗ್ಗೆ ಹೇಗೆ ಫೇಕ್ ನರೇಟಿವ್ ಗಳನ್ನು ಕಟ್ಟುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ! ಅಂದಹಾಗೆ, ಸುಳ್ಳು ಹೇಳುವ ಕಲೆಯನ್ನು ಮೋದಿಯವರಿಂದಲೇ ಕಲಿತಿರಾ ಪಾಟೀಲರೇ? ಎಂದು ಕುಹಕವಾಡಿದೆ.
,@BJP4Karnataka ನಾಯಕರು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ First rank ಪಡೆಯಲು ಪೈಪೋಟಿಗೆ ಬಿದ್ದಿರುವಂತಿದೆ!
— Karnataka Congress (@INCKarnataka) January 8, 2024
ಬಿಜೆಪಿ ನಾಯಕರ ಅ‘ಜ್ಞಾನ’ ಸಂಪಾದನೆಯ ಮೂಲ ವಾಟ್ಸಾಪ್ ಯೂನಿವರ್ಸಿಟಿ ಮಾತ್ರ!
ಮೋದಿಯವರು 26 ವರ್ಷದವರಿದ್ದಾಗ ಕೇದಾರನಾಥದಲ್ಲಿ ಪ್ರದಕ್ಷಿಣೆ ಹಾಕಿದ್ದು ಎಂದು ವಿಡಿಯೋ ಹಾಕಿದ @bcpatilkourava ಅವರು ಕನಿಷ್ಠ ಆಲೋಚನಾ ಶಕ್ತಿಯನ್ನೂ… https://t.co/3y9Qfwc5hZ