Home ಟಾಪ್ ಸುದ್ದಿಗಳು ಪರಸ್ಪರ ಗೌರವಿಸುವುದೇ ಮನುಷ್ಯತ್ವದ ದೊಡ್ಡ ಗುಣ: ಸಿಎಂ ಸಿದ್ದರಾಮಯ್ಯ

ಪರಸ್ಪರ ಗೌರವಿಸುವುದೇ ಮನುಷ್ಯತ್ವದ ದೊಡ್ಡ ಗುಣ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮನುಷ್ಯ ದ್ವೇಷಕ್ಕಿಂತ ಕೆಟ್ಟ ಗುಣ ಬೇರೆ ಇಲ್ಲ, ಪರಸ್ಪರ ಗೌರವಿಸುವುದೇ ಮನುಷ್ಯತ್ವದ ದೊಡ್ಡ ಗುಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


ಸವಿತಾ ಸಮಾಜ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಡಾ.ಎಂ.ಎಸ್.ಮುತ್ತುರಾಜ್ ಅವರ ಮಂಗಳವಾದ್ಯ ಕಾದಂಬರಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎಂದು ಬಸವಣ್ಣನವರು ಹೇಳಿದ್ದು ಇದೇ ಕಾರಣಕ್ಕೆ. ಮನುಷ್ಯರು ಪರಸ್ಪರ ಗೌರವಿಸುವುದೇ ದೊಡ್ಡ ಗುಣ. ಅದಕ್ಕೇ ರಾಷ್ಟ್ರಕವಿ ಕುವೆಂಪು ಅವರು “ಸರ್ವ ಜನಾಂಗದ ಶಾಂತಿಯ ತೋಟ” ಎಂದು ಕರೆದಿದ್ದಾರೆ ಎಂದು ಹೇಳಿದ್ದಾರೆ.

Join Whatsapp
Exit mobile version