ಬೆಂಗಳೂರು: ಸೈಬರ್ ವಂಚನೆಯ ಮತ್ತೊಂದು ಮುಖವನ್ನು ಕರ್ನಾಟಕ ಪೊಲೀಸರು ಪತ್ತೆಹಚ್ಚಿದ್ದು, ಯಾವುದೇ ಕಾರಣಕ್ಕೂ ಗುಲಾಬಿ ಬಣ್ಣದ ವಾಟ್ಸ್ಆ್ಯಪ್ ಅಥವಾ ವಾಟ್ಸ್ ಆ್ಯಪ್ ಪಿಂಕ್ ಅನ್ನು ಇನ್ ಸ್ಟಾಲ್ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ವಿಚಾರವಾಗಿ ಎಕ್ಸ್ ನಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಿರುವ ಕರ್ನಾಟಕ ಪೊಲೀಸ್, ಗುಲಾಬಿ ಬಣ್ಣದ ವಾಟ್ಸ್ ಆ್ಯಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ. ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್ ಆ್ಯಪ್ (Apk) ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಕದಿಯಲು ಇಲ್ಲವೇ ಆ್ಯಂಡ್ರಾಯ್ಡ್ ಮೊಬೈಲ್ ಹ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ ಎಂದು ಉಲ್ಲೇಖಿಸಿದೆ.